ನೀರಿಲ್ಲದೆ ಬತ್ತುತ್ತಿದೆ ಕಲ್ಲತ್ತಿಗಿರಿ ಜಲಪಾತ

kallattagiri
ಮಳೆ ಇಲ್ಲದೆ ಕಲತ್ತಿಗಿರಿ ಜಲಪಾತದಲ್ಲಿ ನೀರಿನ ಹರಿವು ಕಡಿಮೆಯಾಗಿರುವುದು.
Published on

ಲಿಂಗದಹಳ್ಳಿ: ಹೋಬಳಿಯಾದ್ಯಂತ ಒಂದು ತಿಂಗಳಿನಿಂದ ಮಳೆ ಬಾರದೆ ಇರುವುದರಿಂದ ಆಲೂಗಡ್ಡೆ, ಶೇಂಗಾ, ಬಟಾಣಿ, ಮುಸುಕಿನ ಜೋಳ ಸೇರಿದಂತೆ ಮುಂಗಾರಿನ ಬೆಳೆಗಳೆಲ್ಲವೂ ಒಣಗುತ್ತಿವೆ. ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ ಭಾಗದಲ್ಲಿ ಸಮರ್ಪಕವಾಗಿ ಮಳೆಯಾಗಿದ್ದರೆ ಹಳ್ಳಕೊಳ್ಳಗಳೆಲ್ಲವೂ ಮೈದುಂಬಿ ಹರಿಯುತ್ತಿದ್ದವು. ಆದರೆ ಮಳೆ ಇಲ್ಲದೆ ದಿನದಿಂದ ದಿನಕ್ಕೆ ಬತ್ತುತ್ತಿವೆ. ಕಲ್ಲತ್ತಿಗಿರಿ ಜಲಪಾತದಲ್ಲೂ ನೀರಿನ ಹರಿವು ಕಡಿಮೆಯಾಗಿದೆ. ಎಲ್ಲೆಡೆ ಮಳೆ ಇಲ್ಲದಿರುವುದರಿಂದ ಬೆಳೆಗಳು ಒಣಗುತ್ತಿವೆ.

ಸೆಪ್ಟೆಂಬರ್ ವೇಳೆಗೆ ಕಟಾವಿಗೆ ಬರಬೇಕಿದ್ದ ಬೆಳೆಗಳೆಲ್ಲವೂ ಒಣಗಿ ರೈತರ ಕೈತಪ್ಪುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net