ಕನ್ನಡ ಕಾವ್ಯ ಪರಂಪರೆಗೆ ದೇಶದ ಉದ್ದಗಲಕ್ಕೂ ಮನ್ನಣೆ ಇದೆ : ಡಾ. ಕಾಳೇಗೌಡ ನಾಗವಾರ

Kalasuruchi
Published on

ಮೈಸೂರು: ಕನ್ನಡ ಕಾವ್ಯ ಪರಂಪರೆಗೆ ದೇಶದ ಉದ್ದಗಲಕ್ಕೂ ಮನ್ನಣೆ ಇದ್ದು, ಕನ್ನಡ ಸಾಹಿತ್ಯ ಹೊರ ರಾಜ್ಯದ ಸಾಹಿತಿಗಳಲ್ಲೂ ಬೆರಗು ಮೂಡಿಸಿದೆ ಎಂದು ಸಾಹಿತಿ ಡಾ. ಕಾಳೇಗೌಡ ನಾಗವಾರ ಹೇಳಿದರು.

ಕುವೆಂಪುನಗರದ ಕಲಾಸುರುಚಿ ಸಂಸ್ಥೆಯು ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಸಂತ ಬನ್ನಾಡಿ ಅವರ ಕವಿತೆಗಳ ಓದು ಹಾಗೂ ‘ಕವಿ ಪ್ರತಿರೋಧದ ನೆಲೆ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಆದಿಕವಿ ಪಂಪ ಅವರ ‘ಮನುಷ್ಯ ಜಾತಿ ತಾನೊಂದೇ ವಲಂ’, ಕುವೆಂಪು ಅವರ ‘ವಿಶ್ವಮಾನವ ಸಂದೇಶ’ ಸೇರಿದಂತೆ ಕನ್ನಡದ ಹಲವು ಸಾಹಿತಿಗಳ ಹಲವು ಮಹತ್ವದ ಸಂದೇಶ ಗಳು ಹೊರ ರಾಜ್ಯದ ಸಾಹಿತಿಗಳಲ್ಲಿ ಬೆರಗು ಮೂಡಿಸಿದ್ದನ್ನು ನಾನು ಗಮನಿಸಿದ್ದೇನೆ. ಮನುಕುಲ ಒಂದೇ ಎಂಬ ಸಂದೇಶವನ್ನು ಕನ್ನಡ ಸಾಹಿತಿಗಳು ನೀಡಿರುವುದು ತುಂಬಾ ವಿಶೇಷವಾದದ್ದು ಎಂದರು.

ಕನ್ನಡ ಸಾಹಿತ್ಯ ತುಂಬಾ ವಿಶಿಷ್ಟವಾಗಿದೆ. ಅದರಲ್ಲೂ ವಿಶೇಷವಾಗಿ ಕನ್ನಡ ಸಾಹಿತ್ಯದಲ್ಲಿ ಕಂಡು ಬರುವ ಜಾತ್ಯತೀತ ತತ್ವ ಎಲ್ಲರನ್ನು ಆಕರ್ಷಿಸಿದೆ. ಹೊರ ರಾಜ್ಯಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಕುರಿತು ಹೆಚ್ಚು ಚರ್ಚೆಗಳು ನಡೆದಿದೆ ಎಂದು ಹೇಳಿದರು.

ವಸಂತ ಬನ್ನಾಡಿ ಅವರ ಕವಿತೆಗಳನ್ನು ಎಚ್. ನಿವೇದಿತಾ, ದೇವಕಿ ಧರ್ಮಿಷ್ಠೆ, ಉಷಾ ನರಸಿಂಹನ್, ಕೆ. ಸುಶೀಲಾ, ಸವಿತಾ ಪ. ಮಲ್ಲೇಶ್, ಡಾ. ಸುಮಾ ಎಂಬಾರ್ ವಾಚಿಸಿದರು. ವೇದಿಕೆಯಲ್ಲಿ ಕವಿ ವಸಂತ ಬನ್ನಾಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net