ಬನಶಂಕರಿ ದೇವಸ್ಥಾನದ ಕಳಸಾರೋಹಣ ನಾಳೆಯಿಂದ

06 upbr 1-Kalasarohan suddi
Published on

ಉಪ್ಪಿನಬೆಟಗೇರಿ: ಮೇ 8 ಹಾಗೂ 9ರಂದು ಶ್ರೀ ಬನಶಂಕರಿ ದೇವಸ್ಥಾನದ ನೂತನ ಶಿಖರದ ಭವ್ಯ ಕಳಸಾರೋಹಣ ಅಂಗವಾಗಿ ವಿವಿಧ ಕಾರ್ಯಕ್ರಮ ಜರುಗಲಿವೆ ಎಂದು ಸಮಿತಿ ಸದಸ್ಯ ವಿಠ್ಠಲ ಶಿನಗಾರಿ ಹೇಳಿದರು.

ಗ್ರಾಮದ ಹೊಸಪೇಟಿ ಮಠ ಓಣಿಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೇ 8ರಂದು ಗ್ರಾಮದಲ್ಲಿ ಪೂರ್ಣ ಕುಂಭದೊಂದಿಗೆ ಕಳಸದ ಮೆರವಣಿಗೆ ಜರುಗಲಿದೆ. ಮೇ 9ರಂದು ನೂತನವಾಗಿ ನಿರ್ವಿುಸಿದ ಬನಶಂಕರಿ ದೇವಸ್ಥಾನದ ಶಿಖರದ ಮೇಲೆ ಕಳಸಾರೋಹಣ ಜರುಗುವುದು. ಅಂದು ಬೆಳಗ್ಗೆ 7 ಗಂಟೆಗೆ ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಳಸಾರೋಹಣ ಹಾಗೂ ಧಾರ್ವಿುಕ ಕಾರ್ಯಕ್ರಮಗಳಿಗೆ ಚಾಲನೆ ನಡೆಯಲಿದೆ.

ಸಂಜೆ 7ಕ್ಕೆ ದೇವರ ದಾಸಿಮಯ್ಯ ವೇದಿಕೆಯಲ್ಲಿ ಜಾನಪದ ಕಲೆಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀಗಳು ಚಾಲನೆ ನೀಡುವರು. ಆಕಾಶವಾಣಿ ಹಾಗೂ ರಾಮದುರ್ಗದ ದೂರದರ್ಶನ ಕಲಾವಿದೆ ಶಂಕ್ರಮ್ಮ ಮುಗಳಿ ತಂಡದಿಂದ ಡೊಳ್ಳು ಕುಣಿತ, ದೀಪನೃತ್ಯ, ಸೋಬಾನೆ ಪದ, ಬೀಸುಕಲ್ಲಿನ ಪದ ಸೇರಿ ಇತರೆ ಜಾನಪದ ಕಲಾ ಪ್ರಕಾರಗಳು ಜರುಗಲಿವೆ. ಇದೇ ವೇಳೆ 250 ಜನರಿಗೆ ಸನ್ಮಾನ ಜರುಗಲಿದೆ.

ಮೇ 9ರಂದು ಸ್ಥಳೀಯ ಗುರುರಾಜ ಪಾಟೀಲ ಹಾಗೂ ಕಲ್ಲೂರಿನ ನರಸಿಂಹ ದೀಕ್ಷಿತ್ ನೇತೃತ್ವದಲ್ಲಿ ಶ್ರೀ ಬನಶಂಕರಿ ದೇವಿಗೆ ಅಭಿಷೇಕ, ಸಂಕಲ್ಪ ಗಣಪತಿ ಪೂಜೆ ಸೇರಿ ಧಾರ್ವಿುಕ ವಿಧಿ-ವಿಧಾನಗಳು ಜರುಗುವವು. ಬುಧವಾರ ಬೆಳಗ್ಗೆ 8 ಗಂಟೆಗೆ ನೂತನವಾಗಿ ನಿರ್ವಣಗೊಂಡ ಶ್ರೀ ಬನಶಂಕರಿ ದೇವಸ್ಥಾನದ ಶಿಖರಕ್ಕೆ ಶ್ರೀಗಳ ಉಪಸ್ಥಿತಿಯಲ್ಲಿ ಕಳಸಾರೋಹಣ ಜರುಗಲಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ವಿವಿಧ ಮಠಾಧೀಶರು, ಗಣ್ಯರು, ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದರು.

ರವಳಪ್ಪ ಶಿನಗಾರಿ, ಬಸವರಾಜ ಕುಸುಬಿ, ಏಗಪ್ಪ ಕುಸುಬಿ, ಜ್ಯೋತೆಪ್ಪ ಶಿನಗಾರಿ, ಸೋಪಾನ ಲೋಲಿ, ಜ್ಞಾನೇಶ್ವರ ಮೋರಕಾರ, ಭೋಜರಾಜ ಕುಸುಬಿ, ರಾಮಚಂದ್ರ ಶಿಗನಳ್ಳಿ, ನಾರಾಯಣ ಲೋಲಿ, ಶಂಕರ ಶಿನಗಾರಿ, ಮಂಜುನಾಥ ಶಿನಗಾರಿ, ನಾಗಪ್ಪ ಕುಸುಬಿ, ಈಶ್ವರ ಹಿತ್ತಲಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net