ದೈವ ಶಕ್ತಿ ಸತ್ಕಾರ್ಯಗಳಿಗೆ ಸದಾ ಸ್ಫೂರ್ತಿ

Oplus_131072
ಸೈದಾಪುರ ಗ್ರಾಮದಲ್ಲಿ ಶ್ರೀ ಹನುಮಾನ ಮಂದಿರ ಗೋಪುರ ಕಳಸಾರೋಣವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನೆರವೇರಿಸಿದರು. ಡಗಡು ಬಿರಾದಾರ, ಗೋವಿಂದ ಪಾಟೀಲ್, ಅಪ್ಪಣ್ಣ ಜನವಾಡ, ಕಾರ್ತಿಕ ಸ್ವಾಮಿ ಇತರರಿದ್ದರು.
Published on

ಬಸವಕಲ್ಯಾಣ: ಭಕ್ತಿ ಶ್ರದ್ಧೆ ಇದ್ದಲ್ಲಿ ದಿವ್ಯಶಕ್ತಿ ಅವಿರ್ಭವಿಸುತ್ತದೆ. ಇಂತಹ ದೈವ ಶಕ್ತಿ ಸತ್ಕಾರ್ಯಗಳಿಗೆ ಸದಾ ಸ್ಫೂರ್ತಿಯನ್ನು ನೀಡುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇವ್ಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಸೈದಾಪುರ ಗ್ರಾಮದಲ್ಲಿ ನೂತನ ಹನುಮಾನ ಮಂದಿರದ ಕಳಸಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ತಿಳಿಯಾದ ನೀರಿನಲ್ಲಿ ಶುದ್ಧವಾದ ಪ್ರತಿಬಿಂಬ ಮೂಡುವಂತೆ ನಿರ್ಮಲವಾದ ಮನದಲ್ಲಿ ದೇವರ ಪ್ರತಿರೂಪ ಮೂಡುತ್ತದೆ. ಸ್ವಾರ್ಥ ರಹಿತ ಧರ್ಮ ಸೇವೆಯಿಂದ ಆತ್ಮ ತೃಪ್ತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜೀವನದಲ್ಲಿ ಕಷ್ಟ, ನಷ್ಟ, ತಾಪತ್ರೆಯ, ಅಶಾಂತಿ, ಆತಂಕ ತಲೆದೋರಿದಾಗ ವೀರ ಆಂಜನೇಯನನ್ನು ಭಕ್ತಿಯಿಂದ ನೆನೆದರೆ ಬದುಕಿಗೆ ಭದ್ರನೆಲೆ ದೊರುಕುವಲ್ಲಿ ಯಾವುದೇ ಸಂದೇಹವಿಲ್ಲ. ಮಂದಿರಕ್ಕೆ ಕಳಶ ಅಳವಡಿಸುವುದೆಂದರೆ ಅದು ಇಡೀ ಗ್ರಾಮದ ಐಕ್ಯತೆಯ ಸಂಕೇತ, ಸೈದಾಪುರ ಜನತೆಯ ಹನುಮ ಭಕ್ತಿ ಸಂಚಿತ ನಿಧಿಯಾಗಿ ಯಾವತ್ತೂ ಕಾಪಾಡಲಿ ಎಂದು ಶುಭ ಹಾರೈಸಿದರು.

ಹಿರೇನಾಗಾಂವ ಶ್ರೀ ಜಯಸಿದ್ಧೇಶ್ವರ ಮಹಾಸ್ವಾಮೀಜಿ, ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು, ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿ ಸಾವಿತ್ರಿ ಶರಣು ಸಲಗರ ಮಾತನಾಡಿದರು. ಪ್ರಮುಖರಾದ ಸಂಜು ಪಾಟೀಲ್, ರಾಜಣ್ಣ ಬೆಳಮಗೆ, ಸಿದ್ರಾಮ ಮೂಳೆ, ಸದಾನಂದ ಪಾಟೀಲ್, ಹಣಮಂತ ಸೂರ್ಯವಂಶಿ, ಅಣ್ಣಪ್ಪ ಸಮದೇ, ಬಾಬಾರಾವ ಪಾಟೀಲ್ ಇತರರಿದ್ದರು. ಕಾರ್ತಿಕ ಸ್ವಾಮಿ ಯಲದಗುಂಡಿ ಹಾಗೂ ಬಸಯ್ಯ ಸ್ವಾಮಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net