ಕಳಸಾಪೂರ ಬಸವಕೇಂದ್ರದಲ್ಲಿ ೧೫೭೫ನೇ ಶಿವಾನುಭವ ಕಾರ್ಯಕ್ರಮ

WhatsApp Image 2025-09-02 at 1.09.16 PM
Published on

ಗದಗ: ಕಳಸಾಪೂರ ಗ್ರಾಮದ ಬಸವಕೇಂದ್ರದ ವತಿಯಿಂದ ದಿನಾಂಕ ೩೧-೦೮-೨೦೨೫ ರಂದು ೧೫೭೫ನೇ ಶಿವಾನುಭವ ಕಾರ್ಯಕ್ರಮ ಮೊದಲಿಗೆ ಸಾಮೂಹಿಕ ಪ್ರಾರ್ಥನೆ ಜರುಗಿತು. ನಂತರ ಎಲ್ಲ ಮಕ್ಕಳಿಂದ ವಚನಗೋಷ್ಠಿ ಜರುಗಿತು. ವೇದಿಕೆಯ ಮೇಲೆ ಕಪ್ಪತ್ತಗಿರಿ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಇಟಗಿಮಠ, ಶ್ರೀಮತಿ ಜಯಶ್ರೀ ಚ. ಖಂಡಮ್ಮನವರ, ಗಂಗಾಧರ ಬ. ಖಂಡಮ್ಮನವರ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಸತ್ಯ ಶುದ್ಧ ಕಾಯಕವ ಮಾಡಿ ತಂದು ವಂಚನೆಯಿಲ್ಲದೆ ಪ್ರಪಂಚವಳಿದು. ಜಂಗಮಕ್ಕೆ ದಾಸೋಹ ಮಾಡುವ ಸದ್ಭಕ್ತನ ಹೃದಯದೊಳಗೆ ಅಚ್ಚೊಚ್ಚಿದಂತಿಪ್ಪ ಕಾಯಧೂಮ ಧೂಳೇಶ್ವರ. ವಚನದ ಭಾವಾರ್ಥ ಕಾಯಕವೆಂದರೆ ದೇಹವನ್ನು ದುಡಿಸುವುದು ಎಂದರ್ಥವಲ್ಲ. ದೇಹವನ್ನು ದಣಿಸಿ ಮಾಡುವ ಕೃಷಿ, ನೇಯ್ಗೆ, ಕಮ್ಮಾರಿಕೆ, ಕುಂಬಾರಿಕೆ ಹೀಗೆ ಅನಂತ ಶ್ರಮಿಕ ವರ್ಗ ಮಾಡುವ ಕಾಯಕವಲ್ಲದೆ ಬುದ್ದಿಯನ್ನು ದುಡಿಸಿ ಜ್ಞಾನದ ಬಲದಿಂದ ಮಾಡುವ ಕೆಲಸಗಳೂ ಪವಿತ್ರ ಕಾರ್ಯಗಳೇ. ವೈದ್ಯ ವೃತ್ತ ಸಾಮಾಜಿಕ ರಂಗದಲ್ಲಿ ಯೋಜನೆ ರೂಪಿಸುವ ಅಭಿಯಂತರ, ಶಿಕ್ಷಕರು, ಸಾಹಿತಿಗಳು ನ್ಯಾಯಾಧೀಶರು, ಸರಕಾರಿ ಯಂತ್ರದಲ್ಲಿ ದುಡಿಯುವಂಥ ನೌಕರೆಲ್ಲರ ಪ್ರಾಮಾಣಿಕ ದುಡಿಮೆಯೂ ಕಾರ್ಯವೆನಿಸುವುದು. ಇವು ಕಾಯಕದ ಎರಡು ಪ್ರಕಾರಗಳಾದರೆ ಮೂರನೆಯದು ತಮ್ಮಲ್ಲಿರುವ ಸಂಪತ್ತನ್ನು ತೊಡಗಿಸಿ ಮಾಡುವ ವ್ಯಾಪಾರ, ವ್ಯವಹಾರ ಉದ್ದಿಮೆಗಳು, ಹೀಗೆ ದೇಹ-ಬುದ್ದಿ-ಧನ ಯಾವುದನ್ನು ಬಳಸಿ ದುಡಿದರೂ ಸತ್ಯ ಶುದ್ಧವಾಗಿರಬೇಕೆ ಹೊರತು ದುರಾಶೆಯಿಂದ ಮೋಸದಿಂದ ಸಂಗ್ರಹಿಸಲು ಪ್ರಯತ್ನಿಸಬಾರದು. ಅದರಿಂದ ಸಮಾಜದಲ್ಲಿ ಅಸಮತೆಯುಂಟಾಗಿ ಜನ ಜೀವನ ಅಸ್ತವ್ಯಸ್ತವಾಗುತ್ತದೆ ಎಂದು ಕಳಸಾಪೂರ ಬಸವಕೇಂದ್ರದ ಕಾರ್ಯಾಧ್ಯಕ್ಷರು, ಕನ್ನಡ ಅಭಿಮಾನಿ ಜನತೆಗೆ ತಿಳಿಸಿದರು.

ಕೊನೆಗೆ ಸಮಾರೋಪ ಸಮಾರಂಭದ ಅಧ್ಯಕ್ಷೀಯ ಭಾಷಣವನ್ನು ಶ್ರೀಮತಿ ಚಂದ್ರಕಲಾ ಇಟಗಿಮಠ ಮಾತನಾಡುತ್ತ ಆಹಾರ, ನೀರು, ವಿದ್ಯುತ್, ದೇಶದ ಅಮೂಲ್ಯ ಸಂಪತ್ತು, ಗಳಿಸಿ, ಉಳಿಸಿ, ಬಳಿಸಿ ದೇಶಪ್ರೇಮಿಗಳಾಗಿರಿ ಅನಗತ್ಯ ಆಹಾರ ಸೇವನೆ ವಿರುದ್ಧ ಜಾಗೃತ ಮೂಡಿಸಿ ನೀವು ಉಳಿಸಿದ ಆಹಾರ ಮತ್ತೊಬ್ಬರ ಜೀವನಾಧಾರ ಎಂದು ಮಾತನಾಡಿದರು. ಕೊನೆಗೆ ವಚನ ಮಂಗಲ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತೆಂದು ಮಲ್ಲಿಕಾರ್ಜುನ ಗ. ಖಂಡಮ್ಮನವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net