ಕಳಸಾಪೂರ ತಾಂಡಾದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಜಾಗೃತಿ

25GDG03
ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಪಂಚಾಯತ್​ರಾಜ್​ ವಿಶ್ವವಿದ್ಯಾಲಯ ವತಿಯಿಂದ ಶನಿವಾರ ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತು ಅರಿವು ಕಾರ್ಯಕ್ರಮ ಜರುಗಿತು. ಕೃಷ್ಣ ದೊಡ್ಡಮನಿ, ಸಿ. ಎ. ಮಾದರ, ಡಿ. ಎಂ. ಚವ್ಹಾಣ, ಯಲ್ಲಪ್ಪ ಕೊಪ್ಪದ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಕಳಸಾಪೂರ ಗ್ರಾಮದ ತಾಂಡಾದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್​ರಾಜ್​ ವಿಶ್ವವಿದ್ಯಾಲಯ ವತಿಯಿಂದ ಶನಿವಾರ ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತು ಅರಿವು ಕಾರ್ಯಕ್ರಮ ಜರುಗಿತು.
ಜಿಪಂ ಸ್ವಚ್ಛ ಭಾರತ ಮಿಷನ್​ ಅಧಿಕಾರಿ ಕೃಷ್ಣ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅಂದಾಗ ಮಾತ್ರ ರೋಗ ರುಜಿನಗಳಿಂದ ಮುಕ್ತವಾದ ಜೀವನ ಸಾಗಿಸಲು ಸಾಧ್ಯ. ನೈರ್ಮಲ್ಯ ಮತ್ತು ಶುಚಿತ್ವಕ್ಕಾಗಿ ನಾವು ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇವೆ. ಅದರ ಪ್ರಯೋಜನವನ್ನು ಗ್ರಾಮಸ್ಥರು ಪಡೆಯಬೇಕು ಎಂದರು.
ಬಸವಕೇಂದ್ರದ ಕಾರ್ಯಾಧ್ಯ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ, ಬಸವಣ್ಣನವರು ನಿರಂತರ ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆಯನ್ನು ಆಳವಾದ ಜ್ಞಾನೋದಯದ ಮಾರ್ಗವಾಗಿ ಒತ್ತಿ ಹೇಳಿದರು. ಎಲ್ಲಾ ಆಧ್ಯಾತ್ಮಿಕ ಚರ್ಚೆಗಳಲ್ಲಿ ಸ್ಥಳಿಯ ಭಾಷೆಯಾದ ಕನ್ನಡದ ಬಳಕೆಯನ್ನು ಅವರು ಪ್ರತಿಪಾದಿಸಿದರು. ಹೀಗಾಗಿ ಇವುಗಳಿಗೆ ಮತ್ಯಾವ ಅನುವಾದ ಮತ್ತು ವ್ಯಾಖ್ಯಾನದ ಅಗತ್ಯವಿಲ್ಲ. ಆಡು ಭಾಷೆಯಲ್ಲಿ ಬಂದದ್ದರಿಂದ ಪ್ರತಿಯೊಬ್ಬರು ಅಧ್ಯಾತ್ಮಿಕ ವಿಚಾರಗಳನ್ನು ಸರಳವಾಗಿ ತಿಳಿಯಬಹುದು ಎಂದರು.
ಬಿ. ಎಚ್​. ಓಲೇಕಾರ ಮಾತನಾಡಿ, ನಮ್ಮ ಗ್ರಾಮವನ್ನು ಸ್ವಚ್ಛವಾಗಿ ಇಡಲು ನಮ್ಮಿಂದ ಯಾವುದೇ ರೀತಿಯ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಸಿ. ಎ. ಮಾದರ, ಡಿ. ಎಂ. ಚವ್ಹಾಣ, ಯಲ್ಲಪ್ಪ ಕೊಪ್ಪದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net