ಕಳಸಾಪೂರ ಗ್ರಾಮದಲ್ಲಿ ಶ್ರೀ ನುಲಿ ಚಂದಯ್ಯನವರ ಜಯಂತ್ಯೋತ್ಸವ

WhatsApp Image 2023-09-01 at 1.23.25 PM
Published on

ಕಳಸಾಪೂರ ಗ್ರಾಮದಲ್ಲಿ ಶ್ರೀ ನುಲಿ ಚಂದಯ್ಯನವರ ಜಯಂತ್ಯೋತ್ಸವನ್ನು ನುಲಿ ಚಂದಯ್ಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕಮೀಟಿ ಭಜಂತ್ರಿ ಓಣಿ, ಕಳಸಾಪೂರದಲ್ಲಿ ದಿನಾಂಕ ೩೧/೦೮/೨೦೨೩ ರಂದು ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯಿAದ ಜರುಗಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನುಲಿ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು ಜ್ಯೋತಿ ಬೆಳಗಿಸುವ ಮುಖಾಂತರ ಗ್ರಾಮದ ಹಿರಿಯ ಮುಖಂಡರಾದ ಶರದರಾವ್ ಹುಯಿಲಗೋಳರವರು, ಮಲ್ಲಿಕಾರ್ಜುನ ಖಂಡಮ್ಮನವರ, ಹನಮಂತಪ್ಪ ನಾಯ್ಕರ, ಕನಕಪ್ಪ ಮಾಳಗಿಮನಿ ಸೇರಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮದ ಹಿರಿಯ ಮುಖಂಡರಾದ ಶರದರಾವ್ ಹುಯಿಲಗೋಳ ಮಾತನಾಡಿ ಭಾರತ ಕಂಡ ಅಖಂಡ ಶರಣ ಸಂತರು ಈ ನಾಡಿಗಾಗಿ ಜಾತಿ, ಬೇಧ-ಭಾವ ಇಲ್ಲದೆ ತಮ್ಮ ಜೀವನವನ್ನು ಸಮಾಜದ ಸುಧಾರಣೆಗಾಗಿ ಮುಡುಪಾಗಿಟ್ಟು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಅದರಂತೆ ನುಲಿ ಚಂದಯ್ಯನವರು ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಕಾಯಕಯೋಗಿ ನೂಲನ್ನು ತಯಾರಿಸುವ ಕಾಯಕವನ್ನು ಕೈಕೊಂಡು ಕಾಯಕನಿಷ್ಠೆಯಲ್ಲಿ ದೇವರನ್ನು ಕಂಡವರು ಇಂದಿನ ಎಲ್ಲ ಸಮಾಜ ಬಾಂಧವರು ನುಲಿ ಚಂದಯ್ಯನವರ ಆದರ್ಶ ವ್ಯಕ್ತಿತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗೋಣ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕಳಸಾಪೂರ ಗ್ರಾಮದ ಬಸವಕೇಂದ್ರದ ಕಾರ್ಯಾಧ್ಯಕ್ಷರಾದ, ಕನ್ನಡ ಅಭಿಮಾನಿ, ಜನಪ್ರಿಯ ಸಮಾಜ ಸೇವಕ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ ನುಲಿ ಚಂದಯ್ಯನವರ ಜನನ ೧೧೦೭ ರಲ್ಲಿ ಜನಿಸಿದರೆಂದು ತಿಳಿದು ಬರುತ್ತದೆ. ಬಸವಣ್ಣನವರ ಕಾಲದಲ್ಲಿ ಶಿವಣಗಿ ಬಿಟ್ಟು ಕಲ್ಯಾಣಕ್ಕೆ ಬಂದು ನೂಲಿಯ ಕಾಯಕ ಮಾಡಿಕೊಂಡಿದ್ದರಿAದ ನುಲಿಯ ಚಂದಯ್ಯ ಎಂದು ಹೆಸರು ಬಂದಿರುವುದುAಟು, ಚಂದಯ್ಯನವರು ಶಿವಾನುಭವ ಮಂಟಪದಲ್ಲಿ ನಡೆಯುತ್ತಿದ್ದ ಕಾರ್ಯಕಲಾಪಗಳ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಕಲ್ಯಾಣ ಕ್ರಾಂತಿಯ ನಂತರ ಚಂದಯ್ಯನವರು ಶರಣರ ಗುಂಪನ್ನು ಹಿಂಬಾಲಿಸದೆ ಒಂಟಿಯಾಗಿ ಉಳವಿಗೆ ಬಂದು ಅಲ್ಲಿ ನಾಗಲಾಂಬಿಕೆ ಜೊತೆ ಶಿವಯೋಗ ಪ್ರಾಂತದಲ್ಲಿ ಎಣ್ಣೆಹೊಳೆ ನಂದಿ ಮೊದಲಾದ ಊರುಗಳಲ್ಲಿ ಕೆಲವು ಕಾಲ ವಾಸ್ತವ್ಯ ಮಾಡಿರುತ್ತಾರೆ. ಕೊನೆಗೆ ಹೊಲಕೆರೆ ಸಮೀಪ ನುಲಿನೂರಿನಲ್ಲಿ ವಾಸ್ತವ್ಯ ಮಾಡಿ ಅಲ್ಲಿಯೇ ಲಿಂಗೈಕ್ಯರಾಗಿರುತ್ತಾರೆ ಅದು ಸುಮಾರು ೧೧೭೦ ಇಸ್ವಿಯಲ್ಲಿ ನಡೆದಿರುವುದು ಎಂದು ತಿಳಿದುಬರುತ್ತದೆ ಎಂದರು.
ಪ್ರಾರಂಭದಲ್ಲಿ ನಾಡಗೀತೆಯನ್ನು ಸಾಮೂಹಿಕವಾಗಿ ಪ್ರಸ್ತುತ ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ನೂಲಿ ಚಂದಯ್ಯ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಈರಣ್ಣ ಶಿವಪ್ಪ ಭಜಂತ್ರಿ, ಹನುಮಂತಪ್ಪ ಹನುಮಂತಪ್ಪ ಭಜಂತ್ರಿ, ಮಂಜುನಾಥ ಯಲ್ಲಪ್ಪ ಭಜಂತ್ರಿ, ಹನುಮಂತಪ್ಪ ಫಕ್ಕೀರಪ್ಪ ಭಜಂತ್ರಿ, ಮಂಜುನಾಥ ಪರಶುರಾಮ ಭಜಂತ್ರಿ, ಚಂದಪ್ಪ ಹುಚ್ಚಪ್ಪ ಭಜಂತ್ರಿ ಹಾಗೂ ಬಸವರಾಜ ಸತ್ಯಮ್ಮನವರ, ಹನಮಂತಪ್ಪ ನಾಯ್ಕರ, ಗಣೇಶ ಘೋಡಕೆ, ಭೋಜಪ್ಪ ಭಜಂತ್ರಿ, ಶಿವು ಕಂಬಾರ, ಮುತ್ತು ತಳವಾರ, ಮಹಾದೇವ ಅಣ್ಣಿಗೇರಿ ಸೇರಿದಂತೆ ಗ್ರಾಮದ ವಿವಿಧ ಸಮಾಜದ ಬಾಂಧವರು, ಸಂಘಟನೆಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಈರಣ್ಣ ಶಿವಪ್ಪ ಭಜಂತ್ರಿಯವರ ಕಾರ್ಯಕ್ರಮ ನಿರೂಪಣೆ, ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಮುತ್ತು ಭಜಂತ್ರಿ
ವಂದನಾರ್ಪಣೆಗೈದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net