ಮಳೆಗೆ ದ್ವೀಪದಂತಾದ ಕಳಸ ತಾಲೂಕು

30kls1 (1)
ಹೊರನಾಡು ಸೋಮನಕಟ್ಟೆ ಎಂಬಲ್ಲಿ ಸುನಂದ ಎಂಬುವವರ ಮನೆಗೆ ಗುಡ್ಡ ಜರಿದು ಬಿದ್ದು ಮನೆಗೆ ಹಾನಿಯಾಗಿರುವುದು.
Published on

ಕಳಸ: ಕಳಸ ತಾಲೂಕಿನಾದ್ಯಂತ ಸುರಿದ ಮಹಾ ಮಳೆಗೆ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ, ರಸ್ತೆಗೆ ನದಿ ನೀರು ನುಗ್ಗಿ ಸಂಪರ್ಕ ಕಳೆದುಕೊಂಡು ಕಳಸ ತಾಲೂಕು ಅಕ್ಷರಶಹಃ ದ್ವೀಪದಂತಾಗಿದೆ.
ಎರಡು ದಿನ ಬಿಡುವು ನೀಡಿದ್ದ ಮಳೆ ಸೋಮವಾರ ರಾತ್ರಿಯಿಂದ ಮತ್ತೆ ಅಬ್ಬರಿಸಿದ್ದು, ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತದಿಂದ ಕಳಸ ಪಟ್ಟಣಕ್ಕೆ ಬರುವ ಕಳಸ-ಕೊಟ್ಟಿಗೆಹಾರ ರಸ್ತೆ ಹೊರತುಪಡಿಸಿ ಎಲ್ಲ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭದ್ರಾ ನದಿಯಲ್ಲಿ ನೀರು ಹೆಚ್ಚಾದ ಪರಿಣಾಮ ಕಳಸ-ಹೊರನಾಡು ಮಧ್ಯೆ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡಿದೆ. ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯ ನೆಲ್ಲಿಬೀಡು ಎಂಂಬಲ್ಲಿ ಭದ್ರಾನದಿ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳಸ-ಕಳಕೋಡು ರಸ್ತೆ ಮಧ್ಯದ ಕೊಳಮಗೆ ಎಂಬಲ್ಲಿ ರಸ್ತೆಗೆ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಂಡಿತು.ಹಿರೇಬೈಲು-ಬಾಳೆಹೊಳೆ ರಸ್ತೆ ಚನ್ನಡ್ಲು ಪ್ರದೇಶದಲ್ಲಿ ಗುಡ್ಡ ಜರಿದು ರಸ್ತೆ ಸಂಪರ್ಕ ಕಡಿತಗೊಂಡಿತು.
ಹೊರನಾಡು-ಬಲಿಗೆ ರಸ್ತೆ ಮೇಲ್ಮಂಚಿಗೆ ಎಂಬಲ್ಲಿ ರಸ್ತೆಗೆ ಗುಡ್ಡ ಜರಿದು ರಸ್ತೆ ಸಂಪರ್ಕ ಕಡಿತಗೊಂಡಿತು. ಹೊರನಾಡು-ಕವನಳ್ಳ ರಸ್ತೆ ಮದ್ಯೆ ಮಾವಿನಹೊಲ ಎಂಬಲ್ಲಿ ರಸ್ತೆ ಗುಡ್ಡ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಳುವಳ್ಳಿ-ಹೊರನಾಡು ರಸ್ತೆಗೆ ಮರ ಬಿದ್ದು ರಸ್ತೆ ಸಂಚಾರ ಕಡಿತಗೊಂಡಿತು.
ಹೊರನಾಡಿನ ಸೋಮನಕಟ್ಟೆ ಎಂಬಲ್ಲಿ ಸುನಂದ ಎಂಬುವವರ ಮನೆಗೆ ಗುಡ್ಡ ಜರಿದು ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿದ್ದ ನಾಲ್ವರನ್ನು ರಕ್ಷಿಸಿ ಕಳಸದ ಕಳಾಜಿ ಕೇಂದ್ರಕ್ಕೆ ಸೇರಿಸಲಾಗಿದೆ. ಇಡಕಣಿ ಗ್ರಾಪಂ ವ್ಯಾಪ್ತಿಯ ಮಾಸ್ತಿಪಾಲ ಶ್ರೀನಿವಾಸ ಎಂಬುವವರ ಮನೆ ಸಮೀಪ ಗುಡ್ಡಜರಿದು ಬಿದ್ದಿದೆ. ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳಂದೂರು ಶ್ರೀನಿವಾಸ ಎಂಬುವವರ ಮನೆಗೆ ಗುಡ್ಡ ಜರಿದು ಬಿದ್ದು ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net