ಕಳಸಾ ತಡೆಗೋಡೆ ತೆರವುಗೊಳಿಸಿ

23 MNL 1-Web
ಮುನವಳ್ಳಿ ಸಮೀಪದ ನವಿಲುತೀರ್ಥ ಡ್ಯಾಂಗೆ ಭೇಟಿ ನೀಡಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಕಳಸಾ-ಬಂಡೂರಿ ಹೋರಾಟ ಸಮಿತಿ ಸದಸ್ಯರು ಹಾಗೂ ರೈತರು ಮನವಿ ಸಲ್ಲಿಸಿದರು. ವಿಜಯ ಕುಲಕರ್ಣಿ, ಶಿವಾನಂದ ಮೇಟಿ, ಪಂಚಪ್ಪ ಹನಸಿ, ಶಂಕರ ಅಂಬಲಿ, ಬಾಳಪ್ಪ ರಡ್ರಟ್ಟಿ, ಶಂಕರ ವಣ್ಣೂರ ಇತರರು ಇದ್ದರು.
Published on

ಮುನವಳ್ಳಿ: ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು. ಕಳಸಾ ಹಳ್ಳಕ್ಕೆ ಇರುವ ತಡೆಗೋಡೆಯನ್ನು ಮಳೆಗಾಲ ಆರಂಭಕ್ಕೂ ಮುನ್ನವೇ ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದರು.

ಸಮೀಪದ ನವಿಲುತೀರ್ಥ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರವೇಶ ಜಾರಕಿಹೊಳಿ ಭೇಟಿ ನೀಡದ ವೇಳೆ ಮನವಿಪತ್ರ ನೀಡಿ ಒತ್ತಾಯಿಸಿದರು. ರೈತ ಹೋರಾಟಗಾರ, ಸಹಕಾರಿ ಧುರೀಣ ಉಮೇಶ ಬಾಳಿ ಮಾತನಾಡಿ, ಈ ಭಾಗದವರು ಜಲಸಂಪನ್ಮೂಲ ಸಚಿವರಾಗಿರುವುದು ಸಂತಸ ತಂದಿದೆ. ಬೆಳಗಾವಿ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಳಸಾ-ಬಂಡೂರಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ವಿಜಯ ಕುಲಕರ್ಣಿ, ಬೆಳಗಾವಿ ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ, ಪಂಚಪ್ಪ ಹನಸಿ, ಶಂಕರ ಅಂಬಲಿ, ಬಾಳಪ್ಪ ರಡ್ರಟ್ಟಿ, ಶಂಕರ ವಣ್ಣೂರ, ಶಂಕರಗೌಡ ಪಾಟೀಲ, ರಾಜು ಘಟವಾಳಿಮಠ, ಮಂಜು ಬಸಲಿಗುಂದಿ, ಹನುಮಂತ ಹಡಪದ, ಎಸ್.ಎಸ್.ಪಾಟೀಲ, ಮುತ್ತು ರಾಯರೆಡ್ಡಿ, ಬಸವರಾಜ ಚುಳಕಿ, ಜಗದೀಶ ಮರಡಿಮಠ ಇತರರು ಇದ್ದರು. ಇದಕ್ಕೂ ಮುನ್ನ ಸಚಿವರನ್ನು ಹೋರಾಟ ಸಮಿತಿ ಸದಸ್ಯರು ಸನ್ಮಾನಿಸಿ, ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net