ಕಳಸಾ ಬಂಡೂರಿ ಯೋಜನೆ ಕಾಮಗಾರಿ ಶೀಘ್ರ ಆರಂಭಕ್ಕೆ ಒತ್ತಾಯ

18Jaggu10
ಕಳಸಾ ಬಂಡೂರಿ ಯೋಜನೆ ಕಾಮಗಾರಿ ಶೀಘ್ರ ಆರಂಭಿಸುವಂತೆ ಒತ್ತಾಯಿಸಿ ಶುಕ್ರವಾರ ನಗರಗುಂದದ ಕಳಸಾ ಬಂಡೂರಿ ಹೋರಾಟಗಾರರಿಂದ ಬೆಳಗಾವಿ ನಗರದಲ್ಲಿ ಪ್ರತಿಭಟನೆ ನಡೆಯಿತು. ವಿಜಯ ಕುಲಕರ್ಣಿ, ತ್ರಿವೇಣಿ ಪಟಾತ ಇತರರಿದ್ದರು.
Published on

ಬೆಳಗಾವಿ: ಕಳಸಾ ಬಂಡೂರಿ ಯೋಜನೆ ಕಾಮಗಾರಿ ಶೀಘ್ರ ಆರಂಭಿಸುವಂತೆ ಒತ್ತಾಯಿಸಿ ಶುಕ್ರವಾರ ನಗರಗುಂದದ ಕಳಸಾ ಬಂಡೂರಿ ನಾಲಾ, ಮಲಪ್ರಭಾ ನದಿ ಜೋಡಣಾ ಯುವ ಹೋರಾಟ ಕೇಂದ್ರ ಸಮಿತಿ, ಬೆಳಗಾವಿ ಮಹಿಳಾ ಹೋರಾಟ ರಾಜ್ಯ ಸಮಿತಿಯಿಂದ ನಗರದಲ್ಲಿ ಒಣಕೆ, ಬಾರುಕೋಲು ಹಿಡಿದು ಪ್ರತಿಭಟನೆ ನಡೆಯಿತು.

ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ನಾಗರಿಕರ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲು ಅತ್ಯಂತ ತುರ್ತಾಗಿ ಕಾಮಗಾರಿ ಆರಂಭಿಸಬೇಕು. ಕಣಕುಂಬಿ ಭಾಗದಲ್ಲಿ ಕಳಸಾ ಬಂಡೂರಿ ನಾಲೆಯ ನೀರು ಹೇರಳವಾಗಿದೆ. ಈ ನೀರನ್ನು ಬಳಸದೆ ವ್ಯರ್ಥವಾಗುತ್ತಿದೆ. ಕಳೆದ 60 ವರ್ಷಗಳಿಂದ ಈ ಯೋಜನೆ ಅನುಷ್ಠಾನಗೊಳಿಸುವಂತೆ ಹೋರಾಟ ನಡೆಸಿದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೋರಾಟಗಾರ ವಿಜಯ ಕುಲಕರ್ಣಿ ಮಾತನಾಡಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈವರೆಗೂ ಬಾರಕೋಲ ಚಳವಳಿ ಮೂಲಕ ಹೋರಾಟ ಮಾಡಿದ್ದೇವು. ಈಗ ಬಾರಕೋಲ ಜತೆಗೆ ಒನಕೆ ಹೋರಾಟ ನಡೆಸಲಾಗುವುದು ಎಂದರು. ತ್ರಿವೇಣಿ ಪಟಾತ, ಸುಭಾಷ ದುಬಾಲೆ, ಶಿವಾನಂದ ಮೇಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net