ಕಳಸಾ-ಬಂಡೂರಿ ನಾಲಾ ಜೋಡಿಸಲಿ

web3
ನಯಾನಗರ ಗ್ರಾಮದ ಮಲಪ್ರಭಾ ನದಿಗೆ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಮಡಿವಾಳೇಶ್ವರ ಸ್ವಾಮೀಜಿ ಬಾಗಿನ ಅರ್ಪಿಸಿದರು. ಶಿವರಂಜನ ಬೋಳನ್ನವರ, ಮಡಿವಾಳಪ್ಪ ಹೋಟಿ, ಪ್ರಮೋದಕುಮಾರ ವಕ್ಕುಂದಮಠ ಇತರರು ಇದ್ದರು.
Published on

ಬೈಲಹೊಂಗಲ: ಈ ಭಾಗದ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಲು ಮಲಪ್ರಭಾ ನದಿಗೆ ಕಳಸಾ ಬಂಡೂರಿ ನಾಲೆ ಜೋಡಿಸಲು ಜನಪ್ರತಿನಿಧಿಗಳು, ಸರ್ಕಾರ ಹೆಚ್ಚಿನ ಇಚ್ಛಾಸಕ್ತಿ ಪ್ರದರ್ಶಿಸದಿದ್ದರೆ ಜನರೊಂದಿಗೆ ಹೋರಾಟ ಮಾಡಲು ಮುಂದಡಿ ಇಡಲಾಗುವುದು ಎಂದು ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

ತಾಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿಗೆ ಬುಧವಾರ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದರು. ಮಲಪ್ರಭಾ ನದಿಗೆ ಕಳಸಾ ಬಂಡೂರಿ ನಾಲಾ ಜೋಡಣೆ ಮಾಡಬೇಕೆಂಬ ರೈತರ ಕೂಗಿಗೆ ಸರ್ಕಾರಗಳು ಮೃದು ಧೋರಣೆ ತಾಳಿರುವುದು ಸರಿಯಲ್ಲ. ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ರೈತರ ಕನಸು ನನಸು ಮಾಡಬೇಕು ಎಂದರು.

ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿರುವುದು ಹರ್ಷ ತಂದಿದೆ. ಸರ್ಕಾರಗಳು ತಕ್ಷಣವೇ ಗಡಿ, ಅರಣ್ಯ ಸಮಸ್ಯೆ ಬಗೆಹರಿಸಿ ಕಳಸಾ ಬಂಡೂರಿ ನಾಲಾ ಜೋಡಣೆಗೆ ಕ್ರಮವಹಿಸಬೇಕು. ಇಲ್ಲವಾದರೆ ಮತ್ತೊಮ್ಮೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಗುರು ಮಡಿವಾಳೇಶ್ವರಮಠದ ಪೀಠಾಧಿಪತಿ ಮಡಿವಾಳೇಶ್ವರ ಸ್ವಾಮೀಜಿ ಮಾತನಾಡಿ, ರೈತರು ಈ ಬಾರಿ ಸಮೃದ್ಧ ಸಲು ತೆಗೆಯಲಿ ಎಂದು ಆಶಿಸಿದರು.

ಬಸಯ್ಯ ಕಾಳಚರಂತಿಮಠ ಪೂಜೆ ನೆರವೇರಿಸಿದರು. ನಟ ಶಿವರಂಜನ ಬೋಳನ್ನವರ, ಮಡಿವಾಳಪ್ಪ ಹೋಟಿ, ವಿ.ಎಸ್.ಕೋರಿಮಠ, ಪ್ರಮೋದಕುಮಾರ ವಕ್ಕುಂದಮಠ, ಕಾಶಿನಾಥ ಬಿರಾದಾರ, ಮಹಾಂತೇಶ ಮತ್ತಿಕೊಪ್ಪ, ಶ್ರೀಶೈಲ ಶರಣಪ್ಪನವರ, ಮಹಾಂತೇಶ ಅಕ್ಕಿ, ಮಹೇಶ ಕೋಟಗಿ, ಸುನೀಲ ಮರಕುಂಬಿ, ಬಸವರಾಜ ದೊಡಮನಿ, ಸುಭಾಸ ತುರಮರಿ, ರವಿ ತುರಮರಿ, ಸಂತೋಷ ಕೊಳವಿ, ರತ್ನಾ ಬಿಳ್ಳೂರ, ತಿಪ್ಪವ್ವ ಹೂಲಿ, ಲಕ್ಷ್ಮೀ ಮುಗಡಲಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net