ಕಳಸಾ-ಬಂಡೂರಿ ಕನಸು ನನಸಾಗಲಿ

web3
ಯರಗಟ್ಟಿಯಲ್ಲಿ ಸುವರ್ಣಸೌಧ ಚಲೋ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಮುರುಘರಾಜೇಂದ್ರ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯರು, ಸಂಜೀವಕುಮಾರ ನವಲಗುಂದ, ಗಣಪತಿ ಮಹಾರಾಜರು ಇತರರಿದ್ದರು.
Published on

ಯರಗಟ್ಟಿ: ಮಹದಾಯಿ ನೀರಿಗಾಗಿ ರೈತರು ಹೋರಾಟ ಮಾಡಿ ಕಂಗಾಲಾಗಿದ್ದಾರೆ. ಇನ್ನಾದರೂ ಕಳಸಾ-ಬಂಡೂರಿ ಕನಸು ನನಸಾಗಿ ರೈತರ ಬಾಳು ಹಸನಾಗಬೇಕಿದೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ‘ಬೆಳಗಾವಿ ಸುವರ್ಣಸೌಧ ಚಲೋ’ ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬಿಜೆಪಿ ಮುಖಂಡ ಸಂಜೀವಕುಮಾರ ನವಲಗುಂದ ಮಾತನಾಡಿ, ರೈತರಿಗೆ ನೀರಾವರಿ ಸೌಲಭ್ಯ ಸೇರಿ ಯರಗಟ್ಟಿ ತಾಲೂಕಿಗೆ ಎಲ್ಲ ಕಚೇರಿಗಳು ಶೀಘ್ರ ಪ್ರಾರಂಭವಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಸೋಮು ರೈನಾಪುರ, ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ಚಂದ್ರಶೇಖರ ಶಿವಾಚಾರ್ಯರು, ಪ್ರಕಾಶ ವಾಲಿ, ಶಿವಾನಂದ ಕರಿಗನ್ನವರ, ಭಾಸ್ಕರ ಹಿರೇಮೆತ್ರಿ, ಚಿದಂಬರ ಕಟ್ಟಿಮನಿ, ರಾಮಕಷ್ಣ ಎಳ್ಳೆಮ್ಮಿ, ರಂಗಪ್ಪ ಗಂಗರಡ್ಡಿ, ಡಿ.ಕೆ.ರಫೀಕ್, ಶೇಖರ ಖಿಲಾರಿ, ಎಕ್ಕೆರೆಪ್ಪ ತಳವಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net