

ರೋಣ: ಪಟ್ಟಣದ ಎಲ್.ಐ. ದಿಂಡೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರದಿಂದ ಆಚರಿಸಲಾಯಿತು.
ಮಕ್ಕಳಿಗಾಗಿ ಮದ್ದು ಕೃಷ್ಣ ಸ್ಪರ್ಧೆ, ಶ್ರೀ ಕೃಷ್ಣನ ಭಕ್ತಿಗೀತೆ ಸ್ಪರ್ಧೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಮೊಸರು ಕುಡಿಕೆ ಒಡೆಯುವ ಸ್ಪರ್ಧೆ, ಹಗ್ಗಜಗ್ಗಾಟ ಆಯೋಜಿಸಲಾಗಿತ್ತು. ಪಾಲಕರು, ಮಕ್ಕಳು ಭಾಗವಹಿಸಿ ಮನಸೆಳೆದರು. ಶಿಕ್ಷಕರಿಂದ ಪುಟಾಣಿಗಳಿಗೆ ಅಚ್ಚಮೆಚ್ಚಾಗಿರುವ ಕೃಷ್ಣನಲೀಲೆಗಳನ್ನು ಹೇಳಿಕೊಡಲಾಯಿತು .ತೋಟ್ಟಲೋತ್ಸವದಲ್ಲಿ ಮುಸ್ಲಿಂ ಪಾಲಕರು ಪಾಲ್ಗೊಂಡಿದ್ದರು.
ಕೃಷ್ಣನ ವೇಷ ತೊಟ್ಟ ಪುಟಾಣಿಗಳು ಕೈಯಲ್ಲಿ ಕೊಳಲು ಹಿಡಿದು, ನವಿಲುಗರಿ ಕಿರೀಟ ಹಾಕಿಕೊಂಡು ನಲಿದಾಡುತ್ತಿದ್ದ ದೃಶ್ಯ ಮನಸಿಗೆ ಮುದ ನೀಡುವಂತಿತ್ತು. ಸಂಸ್ಥೆಯ ಅಧ್ಯಕ್ಷ ಶ್ರೀ ಶಶಿಧರ ಎಲ್. ದಿಂಡೂರ, ವಿಜಯಕುಮಾರ ಎಸ್. ಹಿರೇಮಠ, ವಿಜಯಲಕ್ಷ್ಮಿ, ದೇವರಡ್ಡಿ, ಶಾರದಾ ತಿಮ್ಮಣ್ಣವರ, ರಾಮಣ್ಣವರ ಮಾತಾಜಿ, ಮುಖ್ಯಶಿಕ್ಷಕಿ ನಿವೇದಿತಾ ಬೇವಿನಕಟ್ಟಿ ಪಾಲ್ಗೊಂಡಿದ್ದರು.