

ಶಿರೋಳ: ಸಮೀಪದ ಕಲ್ಲಾಪುರದ ಉದ್ಭವ ಮೂರ್ತಿ ಬಸವಣ್ಣದೇವರ ಜಾತ್ರಾ ಮಹೋತ್ಸವ ಆ.೨೬ರಂದು ಜರುಗಲಿದೆ. ಅಂದು ಬೆಳಗ್ಗೆ ೬ಗಂಟೆಗೆ ರುದ್ರಾಭಿಷೇಕ, ಮಧ್ಯಾಹ್ನ ಮಹಾಪ್ರಸಾದ, ಸಂಜೆ ೫ಕ್ಕೆ ಕರಡಿಮೇಳ, ಮುತ್ತೈದೆಯರಿಂದ ಆರತಿ, ನಂದಿಕೋಲಿನ ಭವ್ಯ ಮೆರವಣಿಗೆ, ಹರ-ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಮಹಾರಥೊತ್ಸವ ನೆರವೇರಲಿದೆ. ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಇಬಿ ಮತ್ತು ಲಾರಿ ಚಾಲಕರಿಂದ ಅನ್ನ ಸಂತರ್ಪಣೆ ನಡೆಯಲಿದೆ. ೨೬ರಂದು ರಾತ್ರಿ ೧೦.೩೦ಕ್ಕೆ ಶ್ರೀಅಮೋಘ ಸಿದ್ಧೇಶ್ವರ ನಾಟ್ಯ ಸಂಘದಿಂದ ‘ಧರ್ಮದ ಒಡಲಿಗೆ ಕರ್ಮದ ಬೆಂಕಿ’ ನಾಟಕ ಪ್ರದರ್ಶನ, ೨೭ರಂದು ಟಗರು ಕಾಳಗ, ೨೮ರಂದು ಟ್ರಾೃಕ್ಟರ್ ಜಗ್ಗುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.