

ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಪಂನ ಕಾಳಪ್ಪನಹಳ್ಳಿ ಹಾಗೂ ಮಂಚಪ್ಪನಹಳ್ಳಿ 29ನೇ ಕರಗ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮೂರನೇ ಬಾರಿಗೆ ಕರಗ ಹೊತ್ತ ತ್ಯಾಗರಾಜ್ ಅವರೊಂದಿಗೆ ವೀರಕುಮಾರರು ಗೋವಿಂದ ನಾಮಸ್ಮರಣೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಭಕ್ತರು ಶ್ರದ್ಧಾಭಕ್ತಿಯಿಂದ ಕರಗವನ್ನು ಬರಮಾಡಿಕೊಂಡರು. ಮಲ್ಲಿಗೆ ಹೂವು ಸುರಿದು ಭಕ್ತಿ ಸಮರ್ಪಿಸಿದರು. ಕರಗದ ಮೆರವಣಿಗೆಗೆ ತಮಟೆ ಸೇರಿ ಇತರ ವಾದ್ಯಗಳು ಸಾಥ್ ನೀಡಿದ್ದವು. ಗ್ರಾಮದಲ್ಲಿ ಮನರಂಜನಾ ಕಾರ್ಯಕ್ರಮಗಳ ಜತೆಗೆ 11 ದೇವರ ಪಲ್ಲಕ್ಕಿಗಳನ್ನು ಮೆರವಣಿಗೆ ಮಾಡಲಾಯಿತು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಗ್ರಾಪಂ ಅಧ್ಯೆ ಪ್ರಿಯಾಂಕಾ ಡಿ.ರಮೇಶ್, ಕುಲದ ಗೌಡ ಕೆ.ಎಲ್.ಕೃಷ್ಣಪ್ಪ, ವಹ್ನಿಕುಲ ಯಾಜಮಾನ ಕೃಷ್ಣಪ್ಪ, ಮುನಿಯಪ್ಪ, ಕೋಲ್ಕಾರ ರವಿ, ಗ್ರಾಪಂ ಮಾಜಿ ಸದಸ್ಯ ಮುನಿರಾಜು, ಎಂ.ನಾರಾಯಣಸ್ವಾಮಿ, ಲಕ್ಷ$್ಮಣ್, ಶಿವಕುಮಾರ್ ಹಾಗೂ ಕಾಳಪ್ಪನಹಳ್ಳಿ, ಮಂಚಪ್ಪನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.