26ರಂದು ಕಲಾನಾಥೇಶ್ವರ ಸ್ವಾಮಿ ರಥೋತ್ಸವ

bnk temple
ಫಲ್ಗುಣಿ ಶ್ರೀ ಕಲಾನಾಥೇಶ್ವರ ಸ್ವಾಮಿ ದೇವಸ್ಥಾನ.
Published on

ಬಣಕಲ್: ಕೋಳೂರು ಸಾವಿರದ ಫಲ್ಗುಣಿ ಶ್ರೀ ಕಲಾನಾಥೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಾ.26ರಂದು ಜರುಗಲಿದೆ.

24ರಂದು ಸಂಜೆ ಮಹಾಗಣಪತಿ ಪೂಜೆ, ಪ್ರಾರ್ಥನೆ, ಅಂಕುರಾರ್ಪಣೆ, ಧ್ವಜಾರೋಹಣ ಹಾಗೂ ಬಲಿ ಉತ್ಸವ ನಡೆಯಲಿದೆ. 25ರಂದು ಮಧ್ಯಾಹ್ನ ರಥಾರೋಹಣ ನಡೆಯಲಿದೆ. 26ರಂದು ಜಾತ್ರಾ ಮಹೋತ್ಸವ ಹಾಗೂ ಸಂಜೆ 4.30ಕ್ಕೆ ರಥೋತ್ಸವ ನಡೆಯಲಿದೆ. 27ರಂದು ಕಲಾನಾಥೇಶ್ವರ ಸ್ವಾಮಿಗೆ ಅವಭೃತ ಸ್ನಾನ, ಮಧ್ಯಾಹ್ನ ಉತ್ಸವ ನಡೆಯಲಿದೆ ಎಂದು ಕಲಾನಾಥೇಶ್ವರ ಸ್ವಾಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಆರ್.ಸುಧೀರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net