ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಅವಶ್ಯ

dj p pura makkala habba
Published on

ಪರಶುರಾಮಪುರ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿಯಂತಹ ಸ್ಪರ್ಧಾ ಕಾರ್ಯಕ್ರಮಗಳು ವೇದಿಕೆಯಾಗಿರುವುದು ಸಂತಸ ತಂದಿದೆ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ ಹೇಳಿದರು.

ದೇವರಮರಿಕುಂಟೆ ಗ್ರಾಮದ ಕಲಾಮಂದಿರದಲ್ಲಿ ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಹಾಗೂ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ

ಸಂಘ ಹಮ್ಮಿಕೊಂಡಿದ್ದ ಕ್ಲಸ್ಟರ್ ವ್ಯಾಪ್ತಿಯ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಸ್ಪರ್ಧಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯ ಕಂಠಪಾಠ, ಛದ್ಮವೇಶ, ಆಶು ಭಾಷಣ, ಕ್ಲೇಮಾಡಲಿಂಗ್,

ಅಭಿನಯ ಗೀತೆ, ಧಾರ್ಮಿಕ ಪಠಣ ಸ್ಪರ್ಧೆಗಳಲ್ಲಿ ನಾಡು, ನುಡಿ ಸೃಜನಾತ್ಮಕ ಕಲೆಗಳನ್ನು ಬೆಳೆಸಲು ಈ ಕಾರ್ಯಕ್ರಮ ಸಹಕಾರಿ ಎಂದರು.

ಶಾಲಾ ಸಮಿತಿಯ ಅಧ್ಯಕ್ಷ ಎಲ್.ಕೆಂಚಣ್ಣ, ಗ್ರಾಪಂ ಅಧ್ಯಕ್ಷೆ ರಾಧಮ್ಮ, ತಾಲೂಕು ಅಕ್ಷರ ದಾಸೋಹ ಎಡಿಎ ತಿಪ್ಪೇಸ್ವಾಮಿ, ಇಸಿಒ ರವಿಶಂಕರ, ಡಿ.ಮಹಾಲಿಂಗಪ್ಪ, ಕಾರ್ಯದರ್ಶಿ ಎಸ್.ಟಿ.ತಿಪ್ಪೇಸ್ವಾಮಿ, ಈರಣ್ಣ, ರಂಗನಾಥ, ಬಸವರಾಜು, ಮುಖ್ಯಶಿಕ್ಷಕ ಸಿ.ಟಿ. ತಿಪ್ಪೇಸ್ವಾಮಿ, ಎನ್.ಚಿತ್ತಯ್ಯ, ಮೂಡ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net