ಮತದಾನ ಜಾಗೃತಿ ಅಭಿಯಾನ

KLK 25-1
Published on

ಕಲಕೇರಿ: ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ. ಮತದಾನ ಮಾಡುವುದು ಪ್ರತಿಯೊಬ್ಬರ ಸಂವಿಧಾನಾತ್ಮಕ ಹಕ್ಕಾಗಿದ್ದು, ಅದನ್ನು ಯಾವುದೇ ಆಮಿಷಗಳಿಗೆ ಒಳಗಾಗಿ ಮತ ಮಾರಿಕೊಳ್ಳಬೇಡಿ ಎಂದು ಹುಣಶ್ಯಾಳ ಗ್ರಾಮದ ಪಿಡಿಒ ವಿ.ಜಿ. ದೊಡ್ಡಮನಿ ಹೇಳಿದರು.

ಡಿ.27ರಂದು ನಡೆಯಲಿರುವ 2ನೇ ಹಂತದ ಗ್ರಾಪಂ ಚುನಾವಣೆ ಹಿನ್ನೆಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಯದರ್ಶಿ ಎಸ್.ವಿ. ಸ್ಥಾವರಮಠ, ಸಿಬ್ಬಂದಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸಿದರು. ಗ್ರಾಮದ ಹಿರಿಯರಾದ ಪಿ.ಎಚ್. ಸಿಪಾಯಿ, ಎಸ್.ಎಸ್. ದೇಶಮುಖ, ಡಿ.ಕೆ. ದೊಡಮನಿ, ಗುತ್ತಪ್ಪಗೌಡ ಕೋಟಿಕಾನಿ, ಎನ್.ಎಸ್. ಪಾಕಿ, ಸಿ.ಕೆ. ಪತ್ತಾರ, ಆರ್.ಕೆ. ಸಿಪಾಯಿ, ಮುತ್ತು ಪೂಜಾರಿ, ಶರಣಪ್ಪ ಹಿಪ್ಪರಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net