ಬಡ ಕುಟುಂಬಗಳಿಗೆ ಆಹಾರ ಪದಾರ್ಥ ವಿತರಣೆ

KLK 10-1
Published on

ಕಲಕೇರಿ: ಲಾಕ್‌ಡೌನ್ ಹಿನ್ನೆಲೆ ಗ್ರಾಮದಲ್ಲಿ ಸಂಕಷ್ಟಕ್ಕೀಡಾಗಿರುವ ಅಂದಾಜು 105 ಬಡಕುಟುಂಬಗಳಿಗೆ ಡಾ.ನಂದಕುಮಾರ ಜಗನಾಥ್ ಭೈರಿ ಸಹಾಯ ಹಸ್ತ ಸಂಘದ ನೇತೃತ್ವದಲ್ಲಿ ಯುವಕರು ಆಹಾರ ಪದಾರ್ಥ ವಿತರಿಸಿದರು.
ಅಲ್ಲದೆ, ಕರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಗ್ರಾಪಂ ಸಿಬ್ಬಂದಿ, ಪೌರಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮುಖಂಡರಾದ ದೊಡ್ಡಪ್ಪ ಭೈರಿ, ಕುಮಾರ ದೇಸಾಯಿ, ಪ್ರವೀಣ ಭೈರಿ, ನಭಿಲಾಲ್ ನಾಯ್ಕೋಡಿ, ಮಲ್ಲು ಜಂಬಗಿ, ಹಣಮಂತ ವಡ್ಡರ, ಅಶೋಕ ಭೋವಿ, ಮಧುಸೂದನ ಬೆಕಿನಾಳ, ಪವನ ನಾಡಗೌಡ, ಆನಂದ ಪತ್ತಾರ, ಮುತ್ತು ಸಿಂದಗಿ, ಪ್ರವೀಣ ಜಗಶೆಟ್ಟಿ, ರಾಜು ದೇಸಾಯಿ, ಲಾಲು ಬಡೆಮ್ಮಗೋಳ, ಪರಶುರಾಮ ವಡ್ಡರ, ಸುನೀಲ ಬಡಿಗೇರ, ರಾಮು ಕಂಬಾರ, ಶಾಂತಗೌಡ ಸಾಸನೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net