

ಕಲಕೇರಿ: ಶಾಲೆ-ಕಾಲೇಜು ವಿದ್ಯಾರ್ಥಿಗಳಿಗಾಗಿ ಸಮೀಪದ ಆಲಗೂರದಿಂದ ಹುಣಶ್ಯಾಳ, ಕಲಕೇರಿ ಮಾರ್ಗವಾಗಿ ತಾಳಿಕೋಟಿಗೆ ಸಂಚರಿಸುವ ಬಸ್ಸಿಗೆ ಸೋಮವಾರ ಗ್ರಾಮದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ದಲಿತ ವಿದ್ಯಾರ್ಥಿ ಪರಿಷತ್‌ನ ದೇವರಹಿಪ್ಪರಗಿ ಘಟಕದ ಸಹ ಸಂಚಾಲಕ ಕಾಶಿನಾಥ ತಾಳಿಕೋಟಿ, ಭಗತಸಿಂಗ್ ಯುವಕ ಸಂಘದ ಅಧ್ಯಕ್ಷ ರವಿ ಹೊಕ್ರಾಣಿ ಮಾತನಾಡಿ, ಈ ಮುಂಚೆ ತಿಂಗಳಿಗೆ ಸಾವಿರಾರು ರೂ ಖರ್ಚು ಮಾಡಿ ಖಾಸಗಿ ವಾಹನಗಳ ಮೂಲಕ ಶಾಲೆಗೆ ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದರು. ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಹಣ ಹೊಂದಿಸಲು ಸಾಧ್ಯವಾಗದೆ ಅನೇಕರು ಮಧ್ಯದಲ್ಲಿಯೇ ಶಾಲೆ ಬಿಟ್ಟಿರುವುದನ್ನು ಮನಗಂಡು ಬಸ್ ಓಡಿಸುಂತೆ ಅನೇಕ ವಿದ್ಯಾರ್ಥಿಗಳ ಜತೆ ಮನವಿ ಸಲ್ಲಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ನೂತನ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿರುವ ಅಧಿಕಾರಿಗಳ ಕಾರ್ಯ ಸ್ಮರಣೀಯ ಎಂದರು.
ಮುಖಂಡರಾದ ರವಿ ಚಿಗರಿ, ಗುರಣ್ಣ ದೊರೆ, ಕಾಶಿನಾಥ ಮಾಕೊಂಡ, ಸಂತೋಷ ಯಂಕಂಚಿ, ರವಿ ಜಾಲವಾದಿ ಇತರರಿದ್ದರು.