

ಗಜೇಂದ್ರಗಡ: ತಾಲೂಕಿನ ರಾಜೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಳಕವ್ವ ಯಮನೂರಪ್ಪ ಜೊಳ್ಳಿ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿ 21 ಸದಸ್ಯ ಬಲ ಹೊಂದಿದ್ದು, ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಅಧಿಕಾರಿಯಾಗಿ ತಾಪಂ ನೌಕರ ಸಿ.ಬಿ. ಮಾಳಗಿ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷೆ ಕಳಕವ್ವ ಜೊಳ್ಳಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಸೌಲಭ್ಯ ಒದಗಿಸಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಗ್ರಾಪಂ ಉಪಾಧ್ಯಕ್ಷ ಶರಣಪ್ಪ ಸಜ್ಜನರ, ಮುತ್ತಣ್ಣ ತಳವಾರ, ಪರಸಪ್ಪ ರಾಠೋಡ, ಬಸವರಾಜ ಆಡಿನ, ಚಂದ್ರಗೌಡ ಪಾಟೀಲ, ಶಾರದಾ ಜಾಧವ, ನಿಂಗವ್ವ ಶಂಕ್ರಿ, ದಾನವ್ವ ರಾಠೋಡ, ಬಿಬಿಜಾನ ಗಡಾದ, ಜನ್ನತ್‌ಬಿ ನಧಾಪ್, ಲಲಿತವ್ವ ರಾಠೋಡ, ಲಕ್ಷ್ಮವ್ವ ಹೊಸಳ್ಳಿ, ಕಾವೇರಿ ಚಿಲಝರಿ, ಸಿದ್ದಮ್ಮ ಕುರುಮನಾಳ, ಶೇಖಪ್ಪ ಮಳಗಿ, ಶಿವಕುಮಾರ ಜಾಠೋತ್ತರ, ಸುರೇಶ ಪಮ್ಮಾರ, ಚನ್ನಬಸವ ಅಬ್ಬಿಗೇರಿ, ಲಲಿತವ್ವ ತಳವಾರ, ಬಸವರಾಜ ಕಟ್ಟಿಮನಿ, ಸುರೇಶಗೌಡ ಪಾಟೀಲ, ಅಮರೇಶ ನೂಲ್ವಿ, ಶೇಖಪ್ಪ ರಾಠೋಡ, ಶಿವಕುಮಾರ ಜಾಧವ, ರಾಜು ನದಾಫ್, ಅಲ್ಲಸಾಬ ಮುಜಾವರ, ನಿರ್ಮಲಾ ಸೊಲಬಗೌಡ್ರ ಇತರರು ಇದ್ದರು.