

ಗಜೇಂದ್ರಗಡ: ರೋಣ ಕ್ಷೇತ್ರಕ್ಕೆ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಅಭಿವೃದ್ಧಿ ಕಾರ್ಯಗಳು ಅಸ್ಮರಣೀಯವಾಗಿವೆ ಎಂದು ಬಿಜೆಪಿ ರೋಣ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ ಮಲ್ಲಾಪೂರ ಹೇಳಿದರು.
ತಾಲೂಕಿನ ಇಟಗಿ ಗ್ರಾಮದ ಸ್ವಾಮಿ ವಿವೇಕಾನಂದ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಬಿಜೆಪಿ ಹಿಂದುಳಿದ ವರ್ಗದಿಂದ ಕಳಕಪ್ಪ ಬಂಡಿ ಜನ್ಮದಿನ ಅಂಗವಾಗಿ ಮಕ್ಕಳಿಗೆ ನೋಟಬುಕ್, ಪೆನ್ನು ವಿತರಿಸಿ ಅವರು ಮಾತನಾಡಿದರು.
ಜಿಗಳೂರ ಕೆರೆ ನಿರ್ಮಾಣ ಮಾಡಿ ನರೇಗಲ್ಲ, ಗಜೇಂದ್ರಗಡ, ರೋಣ ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರಿನ ಪೂರೈಕೆ, ಮತಕ್ಷೇತ್ರಕ್ಕೆ ಡಿಪ್ಲೊಮಾ ಸೇರಿ ಅನೇಕ ಶಾಲೆ- ಕಾಲೇಜುಗಳನ್ನು ತಂದು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದರು.
ಬಿಜೆಪಿ ತಾಲೂಕು ಹಿಂದುಳಿದ ಮೋರ್ಚಾ ಅಧ್ಯಕ್ಷ ಶ್ರೀಶೈಲ ಕಾಟಿ, ಸಂಗನಗೌಡ ಮಾಲೀಪಾಟೀಲ, ಈರಣ್ಣ ಯರಗೇರಿ, ಹನಮಂತಪ್ಪ ಹೊಸಳ್ಳಿ, ಮಲ್ಲು ಕುರಿ, ಶಿವರಾಯಪ್ಪ ಪಲ್ಲೇದ, ನೀಲಪ್ಪ ಗೋಡಿ, ಅಪ್ಪಯ್ಯ ಹಿರೇಮಠ, ಬಸನಗೌಡ ಗೌಡರ, ಮಲ್ಲಪ್ಪ ಪುರ್ತಗೇರಿ ಇದ್ದರು.