ಕಲಾಕಾರ್ ಪುರಸ್ಕಾರಕ್ಕೆ ರೋಶನ್ ಕ್ರಾಸ್ತಾ ಆಯ್ಕೆ

mng-28oct-roshan crasta
Published on


ಮಂಗಳೂರು : ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ರಾಲ್ಫ್ ರೋಶನ್ ಕ್ರಾಸ್ತಾ ಅವರು ಕಾರ್ವಾಲ್ ಕುಟುಂಬ ಹಾಗೂ ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ 2024ನೇ ಸಾಲಿನ ಕಲಾಕಾರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಕೆಲರಾಯ್ ನಿವಾಸಿ ರಾಲ್ಫ್ ರೋಶನ್ ಕ್ರಾಸ್ತಾ ಅವರು ಸ್ವ ಪರಿಶ್ರಮದಿಂದ ಗಿಟಾರ್‌ನಲ್ಲಿ ಪ್ರಾವೀಣ್ಯ ಪಡೆದವರು. ಹಲವಾರು ಸಂಗೀತ ತಂಡಗಳ ರಸಮಂಜರಿಗಳಲ್ಲಿ ಲೀಡ್ ಗಿಟಾರ್ ನುಡಿಸಿದ್ದಾರೆ. ಹಲವಾರು ಧ್ವನಿ ಸುರುಳಿಗಳಿಗೆ, ವಿಡಿಯೊ ಹಾಡುಗಳಿಗೆ ಸಂಗೀತ ರಚಿಸಿದ್ದಾರೆ. ಕೆಲವು ಹಾಡುಗಳನ್ನು ಬರೆದು ಸ್ವರ ಸಂಯೋಜಿಸಿದ್ದಾರೆ.
ಪ್ರಶಸ್ತಿ 50 ಸಾವಿರ ರೂ.ನಗದು, ಸನ್ಮಾನ ಪತ್ರ, ಸ್ಮರಣಿಕೆ ಒಳಗೊಂಡಿದೆ. ನ.3ರಂದು ಸಾಯಂಕಾಲ 6ಕ್ಕೆ ನಗರದ ಕಲಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net