

ಕಾಳಗಿ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ ಅವರು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಯಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ್ ಹೇಳಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಬಜಾರ್ ಯೂನಿಯನ್, ಕನ್ನಡಪರ ಸಂಘಟನೆಗಳು, ಅಂಗವಿಕಲರ ಸಮೂಹ ಸೇರಿ ವಿವಿಧ ಸಂಘಗಳಿAದ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಮುಖ್ಯಾಧಿಕಾರಿ ಪಂಕಜಾ ಎ. ಅವರಿಗೆ ಸ್ವಾಗತ ಮತ್ತು ನಿರ್ಗಮಿತ ಅಧಿಕಾರಿ ವೆಂಕಟೇಶ ತೆಲಂಗ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕರ್ತವ್ಯದ ಅವಧಿಯಲ್ಲಿ ಯಾರ ಮನಸ್ಸು ನೋಯಿಸಿಲ್ಲ. ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿ, ದಕ್ಷತೆಯಿಂದ ಕೆಲಸ ಮಾಡಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತ ಭೀಮರಾಯ ಮಲಘಾಣ ಮಾತನಾಡಿ, ಪಟ್ಟಣದಲ್ಲಿ ಸುಮಾರು 5ಕ್ಕೂ ಅಧಿಕ ವರ್ಷ ಕರ್ತವ್ಯ ನಿರ್ವಹಿಸಿದ ಏಕೈಕ ಅಧಿಕಾರಿ ತೆಲಂಗ ಆಗಿದ್ದು, ಕುಡಿವ ನೀರು, ವಿದ್ಯುತ್ ವ್ಯವಸ್ಥೆ, ಮುಖ್ಯ ರಸ್ತೆಗಳ ಶುಚಿತ್ವ, ಒಳ ಚರಂಡಿಗಳ ವ್ಯವಸ್ಥೆ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲು ಶ್ರಮಿಸಿದ್ದಾರೆ. ಇದೀಗ ಹೊಸದಾಗಿ ಬಂದಿರುವ ಅಧಿಕಾರಿಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮಾದರಿ ಪಟ್ಟಣ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ನೂತನ ಮುಖ್ಯಾಧಿಕಾರಿ ಪಂಕಜಾ ಎ., ನಿರ್ಗಮಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ, ಮುಖಂಡರಾದ ಸಂತೋಷ ಪತಂಗೆ, ರವಿರಾಜ ಪತಂಗೆ, ಸಂತೋಷ ನರಳಾಳ ಮಾತನಾಡಿದರು. ಪಪಂ ಮಾಜಿ ಸದಸ್ಯ ಜಗನ್ನಾಥ ಚಂದನಕೇರಿ, ಪ್ರಮುಖರಾದ ಅಸ್ಲಾಂ ಬೇಹ್ ಬಿಜಾಪುರ, ವೇದಪ್ರಕಾಶ ಮೋಟಗಿ, ಗೌರಿಶಂಕರ ಗುತ್ತೇದಾರ್, ವಿಠೋಬಾ ಸೇಗಾಂವಕರ, ಶಿವುಕುಮಾರ ಚಿಂತಕೋಟಿ, ನೀಲಕಂಠ ಮಡಿವಾಳ, ಅವಿನಾಶ ಗುತ್ತೇದಾರ್, ಶಾಂತಕುಮಾರ ಗುತ್ತೇದಾರ್, ರೇವಣಸಿದ್ದ ಕಲಶೆಟ್ಟಿ, ನಿಂಗಯ್ಯ ಸುಂಠಾಣ, ಶ್ರೀನಿವಾಸ ಗುರುಮಠಕಲ್, ಭೀಮರಾಯ ಮಲಘಾಣ, ಕೃಷ್ಣ ಸಿಂಗಶೆಟ್ಟಿ, ಗುರುರಾಜ ಆಚಾರಿ, ರಾಜೇಂದ್ರಬಾಬು ಹೀರಾಪುರಕರ, ದತ್ತಾತ್ರೇಯ ಕಲಾಲ, ಕಾಳೇಶ್ವರ ಮಡಿವಾಳ, ಸಾಜಿದ್ ರಾಯಚೂರಕರ್ ಇತರರಿದ್ದರು.