ಕೇಂದ್ರದಲ್ಲಿ ಮತ್ತೆ ಬರಲಿದೆ ಮೋದಿ ಸರ್ಕಾರ

15-klg-1 chabbi run for modi
Published on

ಕಲಘಟಗಿ: ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬರಬೇಕು ಎಂಬ ಉದ್ದೇಶದಿಂದ ‘ಅಭಿವೃದ್ಧಿ ಓಟ’ ರನ್ ಫಾರ್ ಮೋದಿ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
ಪಟ್ಟಣದ ಯುವಶಕ್ತಿ ಸರ್ಕಲ್ ಬಳಿ ಸ್ವಾತಂತ್ರೊೃೀತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರನ್ ಫಾರ್ ಮೋದಿ ಅಭಿವೃದ್ಧಿ ಗಾಗಿ ಓಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಕೇವಲ ರಾಜಕೀಯಕ್ಕಾಗಿ ಕ್ಷೇತ್ರಕ್ಕೆ ಹೆಜ್ಜೆ ಇಟ್ಟವನಲ್ಲ. ನಿಮ್ಮ ಸೇವೆ ಮಾಡಬೇಕೆಂಬ ಅಭಿಲಾಷೆಯಿಂದ ಬಂದಿದ್ದೇನೆ. ಸೋಲು-ಗೆಲುವು ರಾಜಕೀಯದಲ್ಲಿ ಸಹಜ. ನನ್ನ ಹಾಗೂ ಬಿಜೆಪಿ ಮೇಲೆ ಜನರು ಇಟ್ಟಿರುವ ನಂಬಿಕೆ ಹುಸಿಯಾಗದಂತೆ ನೋಡಿಕೊಳ್ಳುತ್ತೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸೋಣ ಎಂದರು.
ವಿಶ್ವ ಹಿಂದು ಪರಿಷತ್ ವಿಭಾಗೀಯ ಕಾರ್ಯದರ್ಶಿ ವಿನಾಯಕ ತಲಗೇರಿ ಮಾತನಾಡಿದರು. ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು ಸಾನ್ನಿದ್ಯ ವಹಿಸಿದ್ದರು. ಚಂದ್ರಗೌಡ ಪಾಟೀಲ, ಐ.ಸಿ. ಗೋಕುಲ, ಸಿ.ಬಿ. ಹೊನ್ನಿಹಳ್ಳಿ, ಸದಾನಂದ ಚಿಂತಾಮಣಿ, ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಶೆರೇವಾಡ, ಗಂಗಾಧರ ಗೌಳಿ, ನಿಂಗಪ್ಪ ಸುತಗಟ್ಟಿ, ಶಿವರುದ್ರಪ್ಪ ಗೋಕುಲ, ಸಿದ್ದಯ್ಯ ಹಿರೇಮಠ, ಕಲ್ಮೇಶ ಬೇಲೂರ, ಬಿಜೆಪಿ ಕಾರ್ಯಕರ್ತರು, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net