ನಿಷ್ಠಾವಂತ ನಾಯಕರಾಗಿದ್ದ ನಿಂಬಣ್ಣವರ

18-KLG-4 NIMBANNAVARV NAMAN
Published on

ಕಲಘಟಗಿ: ತಾಲೂಕಿನ ಮಿಶ್ರಿಕೋಟಿ ಪಪೂ ಕಾಲೇಜಿನ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ್ದ ಸಿ.ಎಂ. ನಿಂಬಣ್ಣವರ ಜೀವನವಿಡೀ ಪ್ರಿನ್ಸಿಪಲ್ ಬದುಕನ್ನೇ ಬದುಕಿದ ನಿಷ್ಠಾವಂತ ನಾಯಕರಾಗಿದ್ದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಹೊಂದಿದ್ದ ಅವರು, ನಮ್ಮೆಲ್ಲರಿಗೆ ಹಿರಿಯ ಮಾರ್ಗದರ್ಶಕರಾಗಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪಟ್ಟಣದ ಹನ್ನೆರಡುಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಶಾಸಕ ದಿ. ಸಿ.ಎಂ. ನಿಂಬಣ್ಣವರ ಹಾಗೂ ಡಾ. ಎಚ್.ಬಿ. ಪಾಟೀಲ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿರಹಟ್ಟಿ ಸಂಸ್ಥಾನಮಠದ ಶ್ರೀ ಫಕೀರೇಶ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಸಿ.ಎಂ. ನಿಂಬಣ್ಣವರ ಕ್ಷೇತ್ರದ ಒಬ್ಬ ಧೀಮಂತ ನಾಯಕರಾಗಿದ್ದರು. ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅದೇ ರೀತಿ ಡಾ. ಎಚ್.ಬಿ. ಪಾಟೀಲ ಅವರು ಈ ಭಾಗದಲ್ಲಿ ರೋಗಿಗಳ ಪಾಲಿನ ಸಂಜೀವಿನಿಯಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದಿ. ಸಿ.ಎಂ. ನಿಂಬಣ್ಣವರ ಕುರಿತ 5 ವರ್ಷಗಳ ಪ್ರಗತಿ ನೋಟ ‘ಅಭಿವೃದ್ಧಿ ಪರ್ವ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಿ.ಎಂ. ನಿಂಬಣ್ಣವರ ಅವರ ಪುತ್ರ ಶಶಿಧರ ನಿಂಬಣ್ಣವರ ಮಾತನಾಡಿದರು. ಹರಿಹರದ ವಚನಾನಂದ ಸ್ವಾಮೀಜಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮೋಹನ ಲಿಂಬಿಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ,
ಎಸ್.ಎಫ್. ಪಾಟೀಲ, ಗೀತಾ ಮರಲಿಂಗಣ್ಣವರ, ವೀರಣ್ಣ ಜಡಿ, ಶಿವಾಜಿ ಡೊಳ್ಳಿನ, ಐ.ಸಿ. ಗೋಕುಲ, ಷಣ್ಮುಖ ಗುರಿಕಾರ, ಸುರೇಶ ಮರಲಿಂಗಣ್ಣವರ, ನಿಂಗಪ್ಪ ಸುತಗಟ್ಟಿ, ಬಸವರಾಜ ಶೇರೆವಾಡ, ಅಶೋಕ ಆಡಿನವರ, ಶಶಿಧರ ಹುಲಿಕಟ್ಟಿ, ಸೋಮು ಕೊಪ್ಪದ, ಸುರೇಶ ಶೀಲವಂತರ, ಬಿಜೆಪಿ ಕಾರ್ಯಕರ್ತರು, ನಿಂಬಣ್ಣವರ ಅಭಿಮಾನಿ ಬಳಗದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net