ಕಲಾಧರೆ ಉತ್ಸವ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕಸ್ತೂರಿ ಫೌಂಡೇಶನ್​ ವತಿಯಿಂದ ಕಲಾಧರೆ ನೃತ್ಯ ಅಕಾಡೆಮಿಯ ಕಲಾಧರೆ ಉತ್ಸವ--2025 ಸಮಾರಂಭವನ್ನು ಜ.18 ರಂದು ಸಂಜೆ 4 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಲಾಗಿದೆ.

ಜಾನಪದ ನೃತ್ಯ, ಸಂಗೀತ ವೈವಿಧ್ಯಮಯ ಸಾಂಸ್ಕೃತಿಕ ಸಮಾರಂಭ ಹಾಗೂ ಕಲಾಧರೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕೆಎಂಎಫ್ ನಿರ್ದೇಶಕಿ ಶಿವಲೀಲಾ ಕುಲಕರ್ಣಿ ಸಮಾರಂಭ ಉದ್ಘಾಟಿಸುವರು. ಬಸವಡ್ಡಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಶಿಕಲಾ ಬಸವರಡ್ಡಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂತೋಷ ಲಾಡ್​ ಫೌಂಡೇಶನ್​ ಅಧ್ಯಕ್ಷ ಆನಂದ ಕಲಾಲ, ಕಾಂಗ್ರೆಸ್​ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌರಿ, ತೋಟಗಾರಿಕೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ರಾಮಚಂದ್ರ ನಾಯ್ಕ, ಉದ್ಯಮಿ ವರುಣ ಸಾಂಬ್ರಾಣಿ ಭಾಗವಹಿಸುವರು.

ಯೋಗಪಟು ಶ್ರೀಧರ ಹೊಸಮನಿ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದ ಗುರು ಪಾಟೀಲ, ರಮೇಶ ಮಲ್ಲೇದಿ, ಶಿವು ಮಾದರ, ರಮೇಶ ಪಾಟೀಲ, ಸುಂದ್ರಯ್ಯ, ವೀರೇಶ ಆಚಾರಿ, ಸಾಕ್ಷಿ ಕಲಕೋಟಿ, ಚಂದ್ರಶೇಖರ ಎನ್​.ಎಂ., ಶ್ರೀಧರ ವಕ್ಕುಂದ ಅವರಿಗೆ ಕಲಾಧರೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಕಲ್ಮೇಶ ತಳವಾರ ಹಾಗೂ ಕಸ್ತೂರಿ ತಳವಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net