ಮತಪತ್ರದಲ್ಲಿ ಚಿಹ್ನೆಗಳು ಅದಲು ಬದಲು, 29ಕ್ಕೆ ಮತದಾನ ಮುಂದೂಡಿಕೆ

KLDG 27-1
Published on

ಕಲಾದಗಿ: ಇಲ್ಲಿನ ಮತಗಟ್ಟೆ ಸಂಖ್ಯೆ 51ರಲ್ಲಿನ ಮತಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆಗಳೇ ಅದಲು ಬದಲಾದ್ದರಿಂದ ಮತದಾನ ಸ್ಥಗಿತಗೊಳಿಸಿ ಡಿ.29 ರಂದು ಮರು ಮತದಾನ ಮಾಡಲು ಆದೇಶಿಸಲಾಗಿದೆ.

ವಾರ್ಡ್ ಸಂಖ್ಯೆ 11 ರಲ್ಲಿ ಸ್ಪರ್ಧಿಸಿರುವ ಹಸನ್ಮಹದ ರೋಣ ಹಾಗೂ ಶಹನಾಜ್‌ಬೇಗಂ ಶೇಖ ಎಂಬುವವರ ಚಿಹ್ನೆಗಳು ಮತಪತ್ರದಲ್ಲಿ ಮೇಲೆ ಕೆಳಗಾಗಿದೆ. ಹಸನ್ಮಹದ ರೋಣ ಅವರು ಪಡೆದಿದ್ದ ಟೆಲಿಪೋನ್ ಚಿಹ್ನೆ ಶಹನಾಜ್‌ಬೇಗಂ ಶೇಖ ಅವರ ಹೆಸರಿನ ಮುಂಭಾಗ ಹಾಗೂ ಶಹನಾಜ್‌ಬೇಗಂ ಶೇಖ ಅವರು ಪಡೆದಿರುವ ತೆಂಗಿನಮರಗಳ ಚಿಹ್ನೆ ಹಸನ್ಮಹದ ರೋಣ ಅವರ ಹೆಸರಿನ ಮುಂಭಾಗ ಮುದ್ರಣವಾಗಿದೆ.

ಸ್ಥಳಕ್ಕೆ ಅಧಿಕಾರಿಗಳ ದೌಡು
ಅಭ್ಯರ್ಥಿಗಳ ಚಿಹ್ನೆಗಳು ಬದಲಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚುನಾವಾಣಾಧಿಕಾರಿ ರಾಮತೀರ್ಥ ಆಗಿರುವ ತಪ್ಪನ್ನು ಸರಿಪಡಿಸಿ 10 ಗಂಟೆ ವೇಳೆಗೆ ಮತದಾನ ಪುನರಾರಂಭಿಸುವ ಮಾತುಗಳನ್ನಾಡಿದರು. ಬಾಗಲಕೋಟೆ ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ ಆಗಮಿಸಿ ಪರಿಶೀಲಿಸಿದರು. ನಂತರ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮತಗಟ್ಟೆ ಸಂಖ್ಯೆ 51ರ ಮತದಾನವನ್ನು ಡಿ.29ಕ್ಕೆ ಮುಂದೂಡಲಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net