ಕಲಾದಗಿಯಲ್ಲಿ ಶೇ.81.08 ಮತದಾನ

KLDG 29-1
Published on

ಕಲಾದಗಿ: ಮತಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆಗಳು ಅದಲು ಬದಲಾದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಕಲಾದಗಿ ಮತಗಟ್ಟೆ ಸಂಖ್ಯೆ 51ರಲ್ಲಿನ ಮತದಾನ ಪ್ರಕ್ರಿಯೆ ಮಂಗಳವಾರ ಶಾಂತಿಯುತವಾಗಿ ನಡೆದಿದ್ದು, ಶೇ.81.08 ಮತದಾನವಾಗಿದೆ.

ಮರುಮತದಾನ ನಡೆದ 11 ನೇ ವಾರ್ಡ್‌ನಲ್ಲಿ 539 ಪುರುಷ ಮತದಾರರ ಪೈಕಿ 458 ಹಾಗೂ 502ಮಹಿಳಾ ಮತದಾರರಲ್ಲಿ 405 ಮಹಿಳೆಯರು ಮತದಾನ ಮಾಡಿದ್ದಾರೆ. ಸದರಿ ವಾರ್ಡ್‌ನಲ್ಲಿ 13 ಜನ ಕಣದಲ್ಲಿದ್ದಾರೆ.

ಇಲ್ಲಿನ ಸರ್ಕಾರಿ ಉರ್ದು ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. 8 ಗಂಟೆ ವೇಳೆಗೆ ಶಾಲೆ ಆವರಣದುದ್ದಕ್ಕೂ ಮತದಾರರು ಉದ್ದನೆಯ ಸರತಿ ಸಾಲಿನಲ್ಲಿ ಕಂಡು ಬಂದರು. ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಸುವ್ಯಸ್ಥಿತ ಮತದಾನಕ್ಕಾಗಿ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆವರೆಗೂ ಮತದಾ ಕೇಂದ್ರದಲ್ಲಿಯೇ ಬೀಡುಬಿಟ್ಟಿದ್ದರು. ಬೆಳಗ್ಗೆ 8 ಗಂಟೆಗೆ ಮತದಾನ ಕೇಂದ್ರಕ್ಕಾಗಮಿಸಿದ ತಹಸೀಲ್ದಾರ್ ಜಿ.ಎಸ್. ಹಿರೇಮಠ ಅವರು ಮತದಾನದ ಕೋಣೆಯಲ್ಲಿ ಮತದಾನದ ಬಾಕ್ಸ್ ಬಳಿಯೇ ಏಜೆಂಟರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದನ್ನು ಗಮನಿಸಿ ಬೇರೆಡೆಗೆ ಸ್ಥಳಾಂತರಿಸಿದರು. ಮತದಾನದ ಕೋಣೆಯಲ್ಲಿ ಮತದಾರರೊಬ್ಬರ ಬಳಿ ಮಾತಿಗಿಳಿದಿದ್ದ ಏಜೆಂಟರೊಬ್ಬರನ್ನು ಗದರಿಸಿ ಹೊರಗೆ ಕಳಿಸಿದರು.

ಜಿಲ್ಲಾ ಚುನಾವಣೆ ವೀಕ್ಷಕರಾದ ಶಶಿಧರ ಕುರೇರ ಹಾಗೂ ಮಹೇಶ ಪೋತದಾರ ಮಧ್ಯಾಹ್ನ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್‌ಐ ರವಿ ಪವಾರ ಅವರು ಸಿಬ್ಬಂದಿಯೊಂದಿಗೆ ಪೊಲೀಸ್ ಭದ್ರತೆ ಒದಗಿಸಿದ್ದರು.

ಮತ್ತೊಂದು ಮತಪೆಟ್ಟಿಗೆ ವ್ಯವಸ್ಥೆ
ಬೆಳಗ್ಗೆ 9 ಗಂಟೆ ವೇಳೆಗೆ ಮತದಾರರ ಸಂಖ್ಯೆ ಹೆಚ್ಚಾಗಿ ಮತದಾನ ಪ್ರಕ್ರಿಯೆ ನಿಧಾನವಾಗುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಮತ್ತೊಂದು ಮತಪೆಟ್ಟಿಗೆ ವ್ಯವಸ್ಥೆ ಮಾಡಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net