ತುಳಸಿಗೇರಿಯಲ್ಲಿ ಸರಣಿ ಕಳ್ಳತನ

KLDG 151
Published on

ಕಲಾದಗಿ: ಸಮೀಪದ ತುಳಸಿಗೇರಿಯಲ್ಲಿನ ಪ್ರವಾಸಿ ಬಂಗಲೆ ಬಳಿಯ ಶರಣಮಡ್ಡಿ ಜನವಸತಿ ಪ್ರದೇಶದಲ್ಲಿನ 5 ಮನೆಗಳಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ.
ಹನುಮಂತ ಸೊಕನಾದಗಿ, ಜಯದೇವಪ್ಪ, ಗೋವಿಂದಪ್ಪ ದಾಸರ, ನಿಂಗಪ್ಪ ದಿವಟಗಿ ಹಾಗೂ ಶೋಭಾ ತಳವಾರ ಅವರ ಮನೆಗಳಲ್ಲಿ ಖದೀಮರು ಕೈಚಳಕ ತೋರಿಸಿದ್ದಾರೆ.

ಹನುಮಂತ ಅವರ ಮನೆಯಲ್ಲಿ 7.30 ಗ್ರಾಂ ಬಂಗಾರ ಹಾಗೂ 6 ಸಾವಿರ ನಗದು ಜಯದೇವಪ್ಪ ಅವರ ಮನೆಯಲ್ಲಿ 4 ಬೆಳ್ಳಿ ಚೈನ್ ಹಾಗೂ 25 ಸಾವಿರ ನಗದು, ಗೋವಿಂದಪ್ಪ ಅವರ ಮನೆಯಲ್ಲಿ 5 ಸಾವಿರ ನಗದು ಹಣ, ನಿಂಗಪ್ಪ ಅವರ ಮನೆಯಲ್ಲಿ 10 ಗ್ರಾಂ ಬಂಗಾರದ ಆಭರಣ, 200 ಗ್ರಾಂ ಬೆಳ್ಳಿ ಆರತಿ ತಟ್ಟೆ ಹಾಗೂ 17 ಸಾವಿರ ನಗದು ದೋಚಲಾಗಿದೆ. ಶೋಭಾ ಅವರ ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ. ಸ್ಥಳಕ್ಕೆ ಸಿಪಿಐ ನಾಗರಾಜ ಅಂಬಿಗೇರ, ಪಿಎಸ್‌ಐ ರವಿ ಪವಾರ ಭೇಟಿ ನೀಡಿ ಪರಿಶೀಲಿಸಿದರು. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net