ಕಲಾದಗಿಯಲ್ಲಿ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ

KLDG 28-1
Published on

ಕಲಾದಗಿ: ಜನವರಿ 1 ರಿಂದ ಶಾಲೆಗಳು ಆರಂಭಕ್ಕೆ ಸರ್ಕಾರದ ಆದೇಶವಾಗಿರುವುದರಿಂದ ಇದಕ್ಕೆ ಪೂರಕವಾಗಿ ಶಿಕ್ಷಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಸೋಮವಾರ ಇಲ್ಲಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆಯಿತು.

ಶಾಲೆ ಆರಂಭವಾಗುವ 72 ಗಂಟೆ ಮೊದಲು ಎಲ್ಲ ಶಿಕ್ಷಕರು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡು ‘ಕೋವಿಡ್ ಇಲ್ಲ’ ವರದಿಯೊಂದಿಗೆ ಶಾಲೆಗೆ ಬರಬೇಕಾಗಿರುವುದು ಕಡ್ಡಾವಿರುವುದರಿಂದ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಮುಂದಾದರು.

ಒಂದೇ ಕಡೆ ಪರೀಕ್ಷೆಗೆ ವ್ಯವಸ್ಥೆ
ಜಿಪಂ ಸಿಇಒ ಅವರ ಆದೇಶದಂತೆ ಬಾಗಲಕೋಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆಯಂತೆ ತುಳಸಿಗೇರಿ ವಲಯ ಹಾಗೂ ಕಲಾದಗಿ ವಲಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಸೋಮವಾರ ಇಲ್ಲಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಕೋವಿಡ್ ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿತ್ತು. ಎರಡೂ ವಲಯದ 100 ಕ್ಕೂ ಅಧಿಕ ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಂಡು ಕೋವಿಡ್ ಪರೀಕ್ಷೆಗೆ ಒಳಗಾದರು.
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಸಂಗಮೇಶ ಗೂಗಿಹಾಳ, ಆರೋಗ್ಯ ಸಹಾಯಕರಾದ ಎಂ.ಸಿ.ಚಿನಗುಂಡಿ ಎಂ.ಬಿ.ಅಂಬಿಗೇರ, ಎಸ್.ಎಸ್.ಜಕ್ಕಣ್ಣವರ ಹಾಗೂ ಆರ್.ಜಿ.ಗುಡದಿನ್ನಿ ಕೋವಿಡ್ ಪರೀಕ್ಷಾ ತಂಡದಲ್ಲಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net