ತುಳಸಿಗೇರಪ್ಪನ ಗುಡಿ ಜಲಾವೃತ

KLDG 11-1
Published on

ಕಲಾದಗಿ: ಶನಿವಾರ ಸಂಜೆಯಿಂದ ಸುರಿದ ಚಿತ್ತಿ ಮಳೆಗೆ ಸಮೀಪದ ಪ್ರಸಿದ್ಧ ಪವಮಾನ ಕ್ಷೇತ್ರವಾದ ತುಳಸಿಗೇರಿ ಹನುಮಂತದೇವರ ದೇವಸ್ಥಾನ 20 ದಿನಗಳಲ್ಲಿ ಎರಡನೇ ಬಾರಿಗೆ ಜಲಾವೃತವಾಗಿದ್ದು, ದೇವರ ದರ್ಶನಕ್ಕೆ ಯಾವುದೇ ತೊಂದರೆಯಾಗಿಲ್ಲ.

ಮೇಲ್ಭಾಗದಿಂದ ಹರಿದುಬಂದ ಮಳೆ ನೀರಿಗೆ ಬಹುತೇಕ ತುಂಬಿದ್ದ ತುಳಸಿಗೇರಿಯ ಬೃಹತ್ ಕೆರೆ ಭಾನುವಾರ ಬೆಳಗ್ಗೆ ಹೊತ್ತಿಗೆ ಮತ್ತೊಮ್ಮೆ ಕೋಡಿ ಹರಿದಿದೆ. ಇದರಿಂದ ಹರಿದುಬಂದ ನೀರಿನಿಂದ ದೇವಾಲಯ ಆವರಣದಲ್ಲಿನ ಬಹುತೇಕ ಒಂದು ಭಾಗ ಹಾಗೂ ಯಾತ್ರಿನಿವಾಸ ಸಂಪೂರ್ಣವಾಗಿ ಜಲಾವೃತವಾಗಿದೆ. ಆಸುಪಾಸಿನಲ್ಲಿರುವ ನಾಲ್ಕು ಅಂಗಡಿಗಳು ನೀರಲ್ಲಿ ನಿಂತಿವೆ.

ಮನೆಗಳ ಕುಸಿತ: ಮಳೆಗೆ ತುಳಸಿಗೇರಿಯಲ್ಲಿ 7 ಮನೆಗಳು, ಚಿಕ್ಕಸಂಶಿಯಲ್ಲಿ 1, ಹಿರೇಸಂಶಿಯಲ್ಲಿ 1 ಮನೆ ಕುಸಿದಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಇಲ್ಲಿರುವ ಮಳೆಮಾಪನದಲ್ಲಿ 38.6 ಎಂಎಂ ಮಳೆ ಬಿದ್ದಿರುವ ಬಗ್ಗೆ ದಾಖಲಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net