

ಕಲಾದಗಿ: ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರಿಗಳ ಅನ್ನಸಂತರ್ಪಣಾ ಸೇವಾ ಸಮಿತಿ ವತಿಯಿಂದ ಮಾ.13ರಿಂದ 17ರವರೆಗೆ ಸ್ಥಳೀಯ ಹಣ್ಣು ಬೆಳೆಗಾರರ ಸಂಘದ ಆವರಣದಲ್ಲಿ ಗ್ರಾಮದ ಮಾರ್ಗವಾಗಿ ಶ್ರೀಶೈಲಕ್ಕೆ ತೆರಳಲಿರುವ ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಕಳೆದೊಂದು ವಾರದಿಂದ ಹಣ್ಣು ಬೆಳೆಗಾರರ ಸಂಘದ ಅವರಣದಲ್ಲಿ ಆರು ಕ್ವಿಂಟಾಲ್‌ಗೂ ಅಧಿಕ ಜೋಳದ ರೊಟ್ಟಿ ಹಾಗೂ ಒಂದು ಕ್ವಿಂಟಾಲ್ ನುಚ್ಚು ತಯಾರಿಸಲಾಗುತ್ತಿದೆ. ಪೆಂಡಾಲ್ ವ್ಯವಸ್ಥೆ, ಯಾತ್ರಿಕರಿಗೆ ಊಟೋಪಚಾರ, ಸ್ನಾನಗೃಹ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ.
ಶ್ರೀಶೈಲ ದೇವಸ್ಥಾನದ ಗರ್ಭಗುಡಿ ಮತ್ತು ಮಲ್ಲಿಕಾರ್ಜುನನ ಯಥಾ ರೂಪವನ್ನು ಸೇವಾ ಸ್ಥಳದಲ್ಲಿ ಸೃಷ್ಟಿಸಲಾಗುತ್ತಿದ್ದು, ಯಾತ್ರಿಕರ ಗಮನ ಸೆಳೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9901130587, 9731101451 ಸಂಪರ್ಕಿಸಲು ತಿಳಿಸಲಾಗಿದೆ.