108 ದಿನಗಳ ಆಹಾರ ಧಾನ್ಯ ಬಿಡುಗಡೆ

KLDG-4-1
Published on

ಕಲಾದಗಿ: ಸರ್ಕಾರದ ಮಾರ್ಗಸೂಚಿಯಂತೆ ಅಕ್ಷರ ದಾಸೋಹ ಯೋಜನೆಯ ಆಹಾರ ಧಾನ್ಯವನ್ನು ಅರ್ಹ ಮಗುವಿನ ಪಾಲಕರಿಗೆ ತಲುಪಿಸುವ ಕಾರ್ಯವನ್ನು ಶಾಲೆ ಶಿಕ್ಷಕರು, ಅಕ್ಷರ ದಾಸೋಹ ಅಡುಗೆ ಸಿಬ್ಬಂದಿ ನಿಷ್ಠೆಯಿಂದ ಮಾಡುತ್ತಿದ್ದಾರೆ ಎಂದು ಅಕ್ಷರದಾಸೋಹ ಯೋಜನೆಯ ಬಾಗಲಕೋಟೆ ತಾಲೂಕು ಸಹಾಯಕ ನಿರ್ದೇಶಕ ಎ.ಎಂ. ರಾಮತೀರ್ಥ ಹೇಳಿದರು.

ಗ್ರಾಮದ ಹಣ್ಣು ಬೆಳೆಗಾರರ ಶಾಲೆಯಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಅಕ್ಷರದಾಸೋಹ ಯೋಜನೆಯ ಆಹಾರ ಧಾನ್ಯವನ್ನು ಪಾಲಕರಿಗೆ ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.

ಸರ್ಕಾರ ಸದ್ಯಕ್ಕೆ 108 ದಿನಗಳ ಆಹಾರ ಧಾನ್ಯವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಸಿಗಬೇಕೆಂಬ ಸದುದ್ದೇಶದಿಂದ ಗೋಧಿಯನ್ನು ನೀಡುತ್ತಿರುವುದು ವಿಶೇಷವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಐದಕ್ಕೂ ಅಧಿಕ ಪಾಲಕರಿಗೆ ಸಾಂಕೇತಿಕವಾಗಿ ಆಹಾರ ಧಾನ್ಯವನ್ನು ವಿತರಿಸಲಾಯಿತು. ಅಧಿಕಾರಿಗಳಾದ ವೈ.ಜಿ. ಮಿಕ್ಕಲ, ಬಿ.ಆರ್.ಗುಮಾಸ್ತೆ, ಮುಖ್ಯಗುರು ಆರ್.ಪಿ. ಜೋಶಿ ಮುಂತಾದವರು ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net