ಗಣೇಶೋತ್ಸವಕ್ಕೆ ಅವಕಾಶ ನೀಡಿ

KLDG 11
Published on

ಕಲಾದಗಿ: ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಕಲೆ ಮತ್ತು ಸಾಂಸ್ಕೃತಿಕ ರಕ್ಷಣಾ ವೇದಿಕೆ ವತಿಯಿಂದ ಗ್ರಾಮದ ನಾಡಕಚೇರಿಯಲ್ಲಿ ಉಪ ತಹಸೀಲ್ದಾರ್ ಪಿ.ಬಿ.ಸಿಂಗ್ರಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಗಣೇಶನ ಹಬ್ಬ ಆಚರಿಸುವುದರ ಮೂಲಕ ರಾಜ್ಯ ಹಾಗೂ ದೇಶಕ್ಕೆ ಕಂಟಕವಾಗಿರುವ ಕರೊನಾ ರೋಗವನ್ನು ಹೊಡೆದೊಡಿಸಲು ಇದೊಂದು ಶುಭ ಸಂದರ್ಭವಾಗಿದೆ. ಮದುವೆ ಸಮಾರಂಭ, ಅಂತ್ಯಸಂಸ್ಕಾರ ಇತರ ಕಾರ್ಯಕ್ರಮಗಳಿಗೆ ನಿಯಮಗಳನ್ನು ವಿಧಿಸಿರುವಂತೆ ಈ ಹಬ್ಬಕ್ಕೂ ನಿಯಮಗಳನ್ನು ವಿಧಿಸಿ ಗಣೇಶ ಮೂರ್ತಿ ಐದು ದಿನ ಸ್ಥಾಪಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸಮಿತಿ ಅಧ್ಯಕ್ಷ ಮಲ್ಲಪ್ಪ ಜಮಖಂಡಿ, ಗೊಂಧಳಿ ಗಜಾನೋತ್ಸವ ಮಂಡಳಿ ಮುಖಂಡರಾದ ಡಿ.ಡಿ.ದುರ್ವೆ, ಅರ್ಜುನ ಮಾದರ, ರಜಾಕ ನದಾಫ್, ಮಲ್ಲಿಕ್ ಮಕಾಂನದಾರ, ಸದಾಶಿವ ಗಣಾಚಾರಿ, ಸದಾಶಿವ ಭಜಂತ್ರಿ ಇತರರಿದ್ದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net