ಉತ್ತಮ ಆರೋಗ್ಯಕ್ಕೆ ಜಿಮ್ ಸಹಕಾರಿ

kldg-14-1
Published on

ಕಲಾದಗಿ: ಕುಸ್ತಿ, ಮಲ್ಲಕಂಬ, ಸೈಕ್ಲಿಂಗ್‌ನಂತಹ ಕ್ರೀಡೆಯಲ್ಲಿ ಅನೇಕ ದಶಕಗಳಿಂದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದಂತಹ ಅನೇಕ ಕ್ರೀಡಾಳುಗಳನ್ನು ರೂಪಿಸಿದ ತುಳಸಿಗೇರಿಯಲ್ಲಿ ಕ್ರೀಡೆಗಳಿಗೆ ಮತ್ತಷ್ಟು ಉತ್ತೇಜನ ನೀಡುವಂತೆ ಜಿಮ್ ಪ್ರಾರಂಭವಾಗುತ್ತಿರುವುದು ಸಂತಸ ತಂದಿದೆ ಎಂದು ಮಾಜಿ ಶಾಸಕ ಪಿ.ಎಚ್.ಪೂಜಾರ ಹೇಳಿದರು.

ಸಮೀಪದ ತುಳಸಿಗೇರಿಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟು ಲಕ್ಷ್ಮಣ ಸೊನ್ನದ ಅವರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿಶೇಷ ಯೋಜನೆಯಲ್ಲಿ ಸಿದ್ಧಪಡಿಸಿರುವ ‘ಮಲ್ಲಕಂಬ ಪವರ್ ಜಿಮ್’ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರು ಉತ್ತಮ ಆರೋಗ್ಯ ಪಡೆಯಲು ಇವತ್ತಿನ ಜಿಮ್‌ಗಳನ್ನು, ವ್ಯಾಯಾಮ ಶಾಲೆಗಳನ್ನು, ಅಲ್ಲಲ್ಲಿ ಇರುವ ಗರಡಿ ಮನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಜಿಪಂ ಸದಸ್ಯೆ ಶೋಭಾ ವೆಂ.ಬಿರಾದಾರಪಾಟೀಲ ಉದ್ಘಾಟಿಸಿದರು. ತಾಪಂ ಉಪಾಧ್ಯಕ್ಷ ಸಂಗಣ್ಣ ಮುಧೋಳ, ಹಿರಿಯ ನ್ಯಾಯವಾದಿ ಸಿ.ಎಲ್.ದಾಸಣ್ಣವರ, ಜಿಲ್ಲಾ ಕ್ರೀಡಾಧಿಕಾರಿ ಎನ್.ವೈ.ಕುಂದರಗಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಮಂಜುಳಾ ಭಂಗಿ, ಉಪಾಧ್ಯಕ್ಷ ಮಂಜುಗೌಡ ಪಾಟೀಲ, ಮುಖಂಡರಾದ ನಾಗಪ್ಪ ಸೊನ್ನದ, ಗೋಪಾಲ ಕೊಳಚಿ, ಶಿವಪುತ್ರಪ್ಪ ದಾಸನ್ನವರ, ಓಬಳೆಪ್ಪ ದೊಡಮನಿ, ರಾಮಣ್ಣ ರೂಗಿ ಇದ್ದರು. ಹನುಮಂತ ಪೂಜಾರ ಪ್ರಾರ್ಥಿಸಿದರು. ಮಾರುತಿ ಬಾರಕೇರ ಸ್ವಾಗತಿಸಿದರು. ಎಂ.ವೈ.ಹುಲ್ಲಿಕೇರಿ ವಂದಿಸಿದರು. ನಾಲತ್ವಾಡ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net