ತುಳಸಿಗೇರಪ್ಪ ದರ್ಶನ ಪುನಾರಂಭ

BKT 51
Published on

ಕಲಾದಗಿ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದಾಗಿದ್ದ ಸಮೀಪದ ತುಳಸಿಗೇರಿ ಹನುಮಂತದೇವರ ದೇವಸ್ಥಾನ ಸೋಮವಾರ ಪ್ರಾರಂಭವಾಗಿದ್ದು, ಭಕ್ತರು ಮುಂಜಾಗ್ರತೆ ಕ್ರಮಗಳೊಂದಿಗೆ ದೇವರ ದರ್ಶನ ಪಡೆದರು. ದೇವಾಲಯ ಸಿಬ್ಬಂದಿ ಹಾಗೂ ಅರ್ಚಕರು ಸ್ಯಾನಿಟೈಸಿಂಗ್, ಪರಸ್ಪರ ಅಂತರ ಬಾಕ್ಸ್ ನಿರ್ಮಾಣ, ಥರ್ಮಲ್ ಸ್ಕ್ರೀನಿಂಗ್ ಸೇರಿ ವಿವಿಧ ಅಗತ್ಯ ಕಾರ್ಯಗಳನ್ನು ಕೈಗೊಂಡಿದ್ದಾರೆ. ಭಕ್ತರು ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಮುನ್ನೆಚ್ಚರಿಕೆಗಳನ್ನು ಪಾಲಿಸಿ ದೇವರ ದರ್ಶನ ಪಡೆಯಬೇಕು ಎಂದು ದೇಗುಲ ಆಡಳಿತಾಧಿಕಾರಿ, ತಹಸೀಲ್ದಾರ್ ಜಿ.ಎಸ್. ಹಿರೇಮಠ ತಿಳಿಸಿದ್ದಾರೆ.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net