ಮಳೆಯಲ್ಲೂ ಪೊಲೀಸ್ ಪೇದೆ ಕರ್ತವ್ಯ ನಿಷ್ಠೆ

KLDG 9-1
Published on

ಕಲಾದಗಿ: ಗ್ರಾಮದ ಕಂಟೇನ್ಮೆಂಟ್ ಜೋನ್‌ಲ್ಲಿ ಮಳೆಯಲ್ಲಿಯೇ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಪೇದೆಯೊಬ್ಬರ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬುಧವಾರ ಮಧ್ಯಾಹ್ನ ಗ್ರಾಮದಲ್ಲಿ ಗಂಟೆಗಟ್ಟಲೆ ಭಾರಿ ಮಳೆಯಾದ ವೇಳೆ ಮೀನುಗಾರ ಓಣಿಯ ಕಂಟೇನ್ಮೆಂಟ್ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ಸಶಸ ಮೀಸಲು ಪಡೆಯ ಪೊಲೀಸ್ ಪೇದೆ ಮಾರುತಿ ಭಜಂತ್ರಿ ಮಳೆಯನ್ನೂ ಲೆಕ್ಕಿಸದೆ ಛತ್ರಿ ಹಿಡಿದು ಕರ್ತವ್ಯ ನಿರ್ವಹಿದ್ದು ಅಲ್ಲಿನ ಜನರ ಗಮನ ಸೆಳೆದಿದೆ. ಅದನ್ನು ವಿಡಿಯೋ ಮಾಡಿದ ವ್ಯಕ್ತಿಯೊಬ್ಬರು ಪೊಲೀಸ್ ಪಡೆ ಬಗ್ಗೆ ಅಭಿಮಾನದ ಮಾತುಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net