ಕಾರು ಅಪಘಾತದಲ್ಲಿ ಇಬ್ಬರು ಸಾವು

BKT123
Published on

ಕಲಾದಗಿ: ಬಾಗಲಕೋಟೆ-ರಾಯಚೂರು ಹೆದ್ದಾರಿ ಸಮೀಪದ ಛಬ್ಬಿ ಕ್ರಾಸ್‌ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿ ಹಾಗೂ ಇನ್ನೊರ್ವ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗುರುವಾರ ಮಧ್ಯರಾತ್ರಿ 1 ಗಂಟೆ ವೇಳೆಗೆ ನಡೆದಿರುವ ಅಪಘಾತದಲ್ಲಿ ಬಾಗಲಕೋಟೆ ನವನಗರದ ಬಾಂಬೆ ಕಾಲನಿಯ ರಂಗಪ್ಪ ಕಟ್ಟಿಮನಿ (24) ಸ್ಥಳದಲ್ಲಿಯೇ ಮೃತಪಟ್ಟರೆ, ರಾಮದುರ್ಗ ತಾಲೂಕಿನ ದಾಡಿಬಾವಿ ಎಲ್.ಟಿ. ತಾಂಡಾದ ಸಾಗರ ನಿಂ. ಲಮಾಣಿ (29) ಚಿಕಿತ್ಸೆ ಲಕಾರಿಯಾಗದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರಿಬ್ಬರು ಎರಡೂ ಕಾರುಗಳ ಚಾಲಕರಾಗಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net