

ಚಿಂಚೋಳಿ: ಕಲಬುರಗಿ-ಬೀದರ್-ಯಾದಗಿರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಯಮಿತದ ನಿರ್ದೇಶಕರ ಸ್ಥಾನಕ್ಕೆ ಚಿಂಚೋಳಿ-ಚಿತ್ತಾಪುರ-ಸೇಡಂ ಚುನಾವಣಾ ಕ್ಷೇತ್ರದಿಂದ 2 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಅಶೋಕ ಪಡಶೇಟ್ಟಿ ಐನಾಪೂರ ಮತ್ತು ವಿಠ್ಠಲ ರೆಡ್ಡಿ ಬೆನಕಿಪಳ್ಳಿ ಆಯ್ಕೆಯಾಗಿದ್ದಾರೆ.
ಗೆಲುವು ಸಾಧಿಸುತ್ತಿದ್ದಂತೆಯೇ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಹಿರಿಯ ನಾಯಕರಾದ ರಮೇಶ ಪಡಶೇಟ್ಟಿ, ರೇವಪ್ಪಾ ಉಪ್ಪಿನ, ರಾಮರಾವ ಪಾಟೀಲ್ ಮೋಘಾ, ಉದಯ ಪಾಟೀಲ ನಾಗಾಯಿ ಇದಲಾಂಯಿ, ರವೀಂದ್ರ ಯರನಳ್ಳಿ, ಅಶೋಕ ಜಾಜಿ, ರಾಜಶೇಖರ ಪಾಟೀಲ ಖಾನಾಪೂರ, ಶೈಲೇಶ್ ಹುಲಿ, ಮಹಾಂತೇಶ ಸಲಗರ್, ಶಿವಕುಮಾರ ಚೌಡಶೇಟ್ಟಿ, ಸಂಜು ಚೌಡಶೇಟ್ಟಿ, ರೇವಣಸಿದ್ದ ಮಾಚಾ,ಪ್ರೇಮಸಿಂಗ್ ಚವಾಣ್, ಅಶೋಕ ಚವಾಣ್, ವಿಜಯಕುಮಾರ್ ಚವಾಣ್, ಗೋಪಾಲ ಚವಾಣ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರುಗಳು ಮತ್ತು ಶ್ರೀ ಕಾರ್ಯದರ್ಶಿಗಳು, ಹಲವು ಪ್ರಮುಖರು ಉಪಸ್ಥಿತರಿದ್ದರು.