ಹಿಂದು ಮಹಾಗಣಪತಿಗೆ ಭರ್ಜರಿ ವಿದಾಯ : ಬೃಹತ್ ಶೋಭಾ ಯಾತ್ರೆ

ಕಲಬುರಗಿ ಗಣೇಶ ಚತುರ್ಥಿ ನಿಮಿತ್ತ ನಗರದ ಕೋಟೆ ಎದುರಿನ ಟ್ಯಾಕ್ಸಿ ಸ್ಟಾÈಂಡ್‌ನಲ್ಲಿ ಪ್ರತಿಷ್ಠಾಪಿಸಿದ್ದ ೨೧ ದಿನದ ಹಿಂದು ಮಹಾಗಣಪತಿ ವಿಸರ್ಜನೆ ಮತ್ತು ಬೃಹತ್ ಶೋಭಾಯಾತ್ರೆ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಶ್ರದ್ಧಾ ಭಕ್ತಿಯೊಂದಿಗೆ ಶಾಂತಿಯುತವಾಗಿ ಜರುಗಿತು. ಈ ಮೂಲಕ ಹಿಂದು ಮಹಾಗಣಪತಿಗೆ ಭರ್ಜರಿ ವಿದಾಯ ಹೇಳಲಾಯಿತು. ಆಳಂದ ಮತ್ತು ಜೇವರ್ಗಿಗಳಲ್ಲೂ ಹಿಂದುಪರ ಸಂಘಟನೆಗಳ ಮಹಾಗಣಪತಿ ವಿಸರ್ಜನೆ ಮೂಲಕ ಹಬ್ಬಕ್ಕೆ ತೆರೆ ಬಿದ್ದಿತು.
IMG-20231009-WA0031
Published on

ಮೆರವಣಿಗೆಯಲ್ಲಿ ಯುವ ನಾಯಕ ಚಂದು ಪಾಟೀಲರ ಹೊತ್ತುಹೊಂಡು‌ ಕುಣಿದು ಕುಪ್ಪಳಿಸಿದ ಯುವಪಡೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಗಣೇಶ ಚತುರ್ಥಿ ನಿಮಿತ್ತ ನಗರದ ಕೋಟೆ ಎದುರಿನಲ್ಲಿ ಪ್ರತಿಷ್ಠಾಪಿಸಿದ್ದ ೨೧ ದಿನದ ಹಿಂದು ಮಹಾಗಣಪತಿ ವಿಸರ್ಜನೆ ಮತ್ತು ಬೃಹತ್ ಶೋಭಾಯಾತ್ರೆ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಶ್ರದ್ಧಾ ಭಕ್ತಿಯೊಂದಿಗೆ ಶಾಂತಿಯುತವಾಗಿ ಜರುಗಿತು. ಈ ಮೂಲಕ ಹಿಂದು ಮಹಾಗಣಪತಿಗೆ ಭರ್ಜರಿ ವಿದಾಯ ಹೇಳಲಾಯಿತು. ಆಳಂದ ಮತ್ತು ಜೇವರ್ಗಿಗಳಲ್ಲೂ ಹಿಂದುಪರ ಸಂಘಟನೆಗಳ ಮಹಾಗಣಪತಿ ವಿಸರ್ಜನೆ ಮೂಲಕ ಹಬ್ಬಕ್ಕೆ ತೆರೆ ಬಿದ್ದಿತು.
ನಗರದಲ್ಲಿ ಶೋಭಾಯಾತ್ರೆ ಚೌಕ್ ವೃತ್ತಕ್ಕೆ ಆಗಮಿಸಿದಾಗ ಯುವಕರ ಜೋಶ್ ಮುಗಿಲು ಮುಟ್ಟಿತ್ತು. ಅರ್ಧ ಗಂಟೆಗೂ ಹೆಚ್ಚು ಡಾನ್ಸ್ ಮಾಡಿದರು. ಮೆರವಣಿಗೆಯುದ್ದಕ್ಕೂ ಹಾಡುಗಳಿಗೆ ಹೆಜ್ಜೆ ಹಾಕಿ ಮೈ ಮನ ಹಗುರ ಮಾಡಿಕೊಂಡರು. ಯುವ ನೇತಾರ ಚಂದು ಪಾಟೀಲ್ ಮೆರವಣಿಗೆ ಕೇಂದ್ರ ಬಿಂದುವಾಗಿದ್ದರು.  
ಸಾಂಪ್ರದಾಯಿಕ ವಾದ್ಯಗಳು ಸಂಗೀತ, ಭಜನೆ, ಹಲಿಗೆ ಕುಣಿತ, ಚಿಟ್ಟ ಹಲಿಗೆ, ನಾಸಿಕ ತಂಡದವರ ಡೊಳ್ಳು ಕುಣಿತ, ಕಂಸಾಳೆ ಕಲಾವಿದರ ಹೆಜ್ಜೆ ಜನಮನ ಸೂರೆಗೊಳಿಸಿತು. ಇನ್ನೊಂದು ಕಡೆ ಯುವಪಡೆ ಡಿಜೆ ಹಚ್ಚಿ ಭರ್ಜರಿ ಸ್ಟೆಪ್ ಹಾಕಿತು. ಮೆರವಣಿಗೆಯುದ್ದಕ್ಕೂ ಕೇಸರಿ ಬಣ್ಣದ ಪರಾರಿ ಚೂರುಗಳನ್ನು ಹಾರಿಸುವುದು ಎಲ್ಲರನ್ನು ರೋಮಾಂಚನಗೊಳಿಸಿತು. ಬಿಜೆಪಿ ಯುವ ನಾಯಕ ಚಂದು ಪಾಟೀಲ್ ಅವರನ್ನು ಅಭಿಮಾನಿಗಳು ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು.
ಹಿಂದು ಜಾಗರಣ ವೇದಿಕೆ ಇತರ ಹಿಂದುಪರ ಸಂಘಟನೆಗಳು ಮತ್ತು ಹಿಂದು ಮಹಾಗಣಪತಿ ಉತ್ಸವ ಸಮಿತಿ ಸಹಯೋಗದಡಿ ಕೋಟೆ ಎದುರಿನ ವಿನಾಯಕನನ್ನು ಪ್ರತಿಷ್ಠಾಪಿಸಲಾಗಿತ್ತು. ೨೧ ದಿನಗಳಿಂದ ನಿರಂತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅದರಲ್ಲೂ ವಿಶೇಷವಾಗಿ ಈ ಸಲ ಸನಾತನ ಧರ್ಮ ಕುರಿತು ನಾಡಿನ ಹಲವೆಡೆಯ ವಾಗ್ಮಿಗಳನ್ನು ಆಹ್ವಾನಿಸಿ ಸರಣಿ ಉಪನ್ಯಾಸ ಕೊಡಿಸುವ ಮೂಲಕ ಹಿಂದು ಧರ್ಮದ ಬಗ್ಗೆ ಜನರನ್ನು ಜಾಗೃತಗೊಳಿಸುವ ಪ್ರಯತ್ನ ಸಾಫಲ್ಯ ಕಂಡಿತು.

ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಶುರು
ಹಿಂದು ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾರ್ಯಗಳನ್ನು ನೆರವೇರಿಸಿದ ಬಳಿಕ ಪರಿಸರಸ್ನೇಹಿ ವಿಘ್ನೇಶ್ವರನ ವಿಸರ್ಜನೆ ಮೆರವಣಿಗೆ ಶುರುವಾಯಿತು. ಕೋಟೆ ಮುಂಭಾಗದಿAದ ಶುರುವಾದ ಮೆರವಣಿಗೆ ಪ್ರಕಾಶ ಚಿತ್ರಮಂದಿರ ಮೂಲಕ ನೇರವಾಗಿ ನೆಹರು ಗಂಜ್‌ಗೆ ತಲುಪಿತು. ಅಲ್ಲಿಂದ ಬೃಹತ್ ಶೋಭಾಯಾತ್ರೆ ಮೂಲಕ ಹುಮನಾಬಾದ್ ಬೇಸ್, ಕಿರಾಣ ಬಜಾರ್, ಚೌಕ್ ವೃತ್ತ, ಕಪಡಾ ಬಜಾರ್, ಸರಾಫ್ ಬಜಾರ್ ಕ್ರಾಸ್, ಫೂಲ್ ಮಾರ್ಕೆಟ್, ಆಸೀಫ್ ಗಂಜ್ ಶಾಲೆ ಮಾರ್ಗವಾಗಿ ಸುಪರ್ ಮಾರ್ಕೆಟ್, ಜಗತ್ ವೃತ್ತ, ಜಿಲ್ಲಾ ವಿಜ್ಞಾನ ಕೇಂದ್ರದ ಮೂಲಕ ಐತಿಹಾಸಿಕ ಅಪ್ಪನ ಕೆರೆಗೆ ಆಗಮಿಸಿ ವಿಸರ್ಜನೆ ಮಾಡಲಾಯಿತು. ಹಿಂದು ಜಾಗರಣ ವೇದಿಕೆ ಅಧ್ಯಕ್ಷ ನಾಗೇಂದ್ರ ಕಾಬಡೆ, ಉತ್ಸವ ಸಮಿತಿ ಅಧ್ಯಕ್ಷ ಸಂಜೀವ್ ಗುಪ್ತಾ, ಕಾರ್ಯದರ್ಶಿಗಳಾದ ಸುರೇಶ ಟೆಂಗಳಿ, ಸಿದ್ದರಾಜ ಬಿರಾದಾರ, ರವೀಂದ್ರ ಮುತ್ತಿನ, ಶ್ರೀಶೈಲ ಮೂಲಗೆ, ಶಿವಯೋಗಿ ನಾಗನಹಳ್ಳಿ, ಮೇಯರ್ ವಿಶಾಲ್ ದರ್ಗಿ, ಉಪ ಮೇಯರ್ ಶಿವಾನಂದ ಪಿಸ್ತಿ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಉದನೂರ, ಪ್ರಭುಲಿಂಗ ಹಾದಿಮನಿ, ಶಂಭುಲಿAಗ ಪಾಟೀಲ್, ಸಚಿನ್ ಹೊನ್ನಾ, ಮುಖಂಡರಾದ ಉಮೇಶ ಪಾಟೀಲ್, ಅಶೋಕ ಮಾನಕರ್,ಶಿವಾ ಅಷ್ಟಗಿ, ಶಿವಾನಂದ ಪಾಟೀಲ್ ಅಷ್ಟಗಿ, ಗಿರೀಶಗೌಡ ಇನಾಮದಾರ ದುಮ್ಮದ್ರಿ, ಶಾಂತು ಧುದನಿ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net