

ಲಿಂಗಸುಗೂರು: ಪಟ್ಟಣದ ಸಾರಿಗೆ ಡಿಪೋ ಮುಂಭಾಗ ನೂತನವಾಗಿ ನಿರ್ಮಿಸುತ್ತಿರುವ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಯನ್ನು ಕಲಬುರ್ಗಿ ವಿಭಾಗೀಯ ಪೀಠದ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ರವಿ ವಿ.ಹೊಸಮನಿ ಭಾನುವಾರ ವೀಕ್ಷಿಸಿದರು.
ನೂತನ ಕಟ್ಟಡದಲ್ಲಿ ಕೋರ್ಟ್ ಹಾಲ್‌ಗಳು, ನ್ಯಾಯಾಧೀಶ ವಸತಿ ಗೃಹ, ವಕೀಲರ ಸಂಘದ ಸಭಾಂಗಣ, ಕಚೇರಿ ಸೇರಿ ಇತರೆ ಕಾಮಗಾರಿಗಳ ನೀಲನಕ್ಷೆ ವೀಕ್ಷಿಸಿದ ಬಳಿಕ ಪಿಡಬ್ಲುೃಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪಟ್ಟಣದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದ ಕಾರ್ಯಕಲಾಪ ನಡೆಸಲು ಸ್ಥಳಾವಕಾಶ ದೊರೆಯುವುದೇ ಎಂಬುದನ್ನು ಚರ್ಚಿಸಿದರು.
ಎರಡು ಅಂತಸ್ತುಗಳನ್ನು ನಾಲ್ಕು ಕೋರ್ಟ್ ಹಾಲ್‌ಗಳು 15.80 ಕೋಟಿ ವೆಚ್ಚದಲ್ಲಿ , 3 ಕೋಟಿ ವೆಚ್ಚದಲ್ಲಿ ವಕೀಲರ ಬಾರ್ ಸಂಘ, 2 ಕೋಟಿ ವೆಚ್ಚದಲ್ಲಿ ನ್ಯಾಯಾಧೀಶರ ನಾಲ್ಕು ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪಿಡಬ್ಲುೃಡಿ ಎಇಇ ಗೋಪಾಲರಡ್ಡಿ ಮಾಹಿತಿ ನೀಡಿದರು. ಕಕ್ಷಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೀಘ್ರ ಗುಣಮಟ್ಟದ ಕಟ್ಟಡ ಕಾಮಗಾರಿ ನಿರ್ಮಿಸಬೇಕು. ಅಲ್ಲದೆ ಸಾರ್ವಜನಿಕ ಸೇವೆಗೆ ಅನುಕೂಲ ಕಲ್ಪಿಸಬೇಕೆಂದು ನ್ಯಾಯಾಧೀಶ ರವಿ ವಿ.ಹೊಸಮನಿ ಸೂಚಿಸಿದರು.
ಜೆಇ ಲಕ್ಷ್ಮೀಕಾಂತ ಗುಂಟಿ, ಸಂದೀಪ ಯಾದವ್, ವಕೀಲರಾದ ಎ.ನಾಗಪ್ಪ, ನಾಗರಾಜ ಗಸ್ತಿ, ಎಚ್.ಮುದುಕಪ್ಪ, ಕುಪ್ಪಣ್ಣ ಮಾಣಿಕ್, ಮಹಾಲಿಂಗಪ್ಪ, ಸೂರ್ಯಚಂದ್ರ, ಕುಪ್ಪಣ್ಣ ಕೋಠಾ, ಪ್ರಭುಗೌಡ, ಪ್ರಲ್ಹಾದ್ ದಿಗ್ಗಾವಿ, ಪರಶುರಾಮ, ನಂದೀಶ, ವಿಶ್ವನಾಥ, ಹಾಜಿಬಾಬು ಇತಇತರರು ಇದ್ದರು.