

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ ಜಿಲ್ಲಾ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಅಡ್ಡೂರು ಶ್ರೀನಿವಾಸುಲು ಅವರು ಬುಧವಾರ ಅಧಿಕಾರ ಸ್ವೀಕಾರ ಸ್ವೀಕರಿಸಿದರು. ಮತ್ತೊಬ್ಬ ಖಡಕ್ ಅಧಿಕಾರಿಯೊಬ್ಬರು ಎಸ್ಪಿಯಾಗಿ ಬಂದಂತಾಗಿದೆ.
ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಅಡೂರು ಅವರು ಕಳೆದ ಎರಡು ವರ್ಷಗಳಿಂದ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಸೇವೆ ಸಲ್ಲಿಸಿದ್ದರು. ಖಡಕ್ ಅಧಿಕಾರಿ ಜತೆಗೆ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಅವರನ್ನು ಸರ್ಕಾರ ಕಲಬುರಗಿ ಜಿಲ್ಲಾ ಎಸ್ಪಿಯಾಗಿ ವರ್ಗಾವಣೆ ಮಾಡಿತ್ತು.
ಬುಧವಾರ ನಗರದ ಪೊಲೀಸ್ ಭವನದಲ್ಲಿ ಅವರು ನಿರ್ಗಮಿತ ಎಸ್ಪಿ ಇಶಾ ಪಂತ್ ಅವರಿಂದ ಪ್ರಭಾರವನ್ನು ವಹಿಸಿಕೊಂಡರು. ಬಳಿಕ ಎಲ್ಲ ಡಿವೈಎಸ್ಪಿಗಳ ಸಭೆಯನ್ನು ನಡೆಸಿದರು. ಅಧಿಕಾರಿಗಳು ಅವರನ್ನು ಭೇಟಿ ಮಾಡಿ ಶುಭ ಕೋರಿದರು.