ಕ್ವಾರಿಯಲ್ಲಿ ಇಳಿದ ಯುವಕರು.. ಮುಂದಾಗಿದ್ದು ದುರಂತ (CHINCHOLI)

ಈಜಾಡಲು ಹೋದ ಇಬ್ಬರು ಯುವಕರು ಜಲಸಮಾಧಿ
ಮೃತ ಅಜಯ್​ ಹಾಗೂ ಸುರೇಂದ್ರ
ಮೃತ ಅಜಯ್​ ಹಾಗೂ ಸುರೇಂದ್ರ
Published on: 

ವಿಜಯವಾಣಿ ಸುದ್ದಿಜಾಲ ಚಿಂಚೋಳಿ

ತಾಲ್ಲೂಕಿನ ಕುಂಚಾವರಂ ಗ್ರಾಮದ ಇಬ್ಬರು ಬಾಲಕರು ನೆರೆಯ ತೆಲಂಗಾಣದ ಬೋಪಾನವರಂ ಗ್ರಾಮದ ಸಮೀಪದ ಕೆಂಪು ಕಲ್ಲಿನ ಗಣಿಗಾರಿಕೆ ಕ್ವಾರಿಯಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಕುಂಚಾವರಂ ಗ್ರಾಮದ ಅಜಯ (16), ಬಕ್ಕಪ್ಪ ಅವರ ಪುತ್ರ ಹಾಗೂ ಸುರೇಂದ್ರ (16), ಶಾಂತಪ್ಪ ಅವರ ಪುತ್ರ ಎಂದು ಗುರುತಿಸಲಾಗಿದೆ. ಇಬ್ಬರೂ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಶುಕ್ರವಾರ ಸಂಜೆ ತೆಲಂಗಾಣದ ಬೋಪಾನವರಂ ಗ್ರಾಮದ ಸಮೀಪದ ಕಲ್ಲು ಗಣಿಗಾರಿಕೆ ಕ್ವಾರಿಯಲ್ಲಿ ಇಬ್ಬರು ಬಾಲಕರ ಶವಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರೂ ಈಜಾಡಲು ಕ್ವಾರಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಂದಿರಾದ ಸುವರ್ಣ ಮತ್ತು ರಾಮಲಮ್ಮ ನೀಡಿದ ದೂರಿನ ಮೇರೆಗೆ ತೆಲಂಗಾಣದ ಭಂಟಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

ಇಬ್ಬರು ಬಾಲಕರ ಅಕಾಲಿಕ ಸಾವಿನಿಂದ ಕುಂಚಾವರಂ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net