

ಕಲಬುರಗಿ: ಇಂದಿನ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಅತ್ಯಂತ ಅಗತ್ಯ ಎಂದು ಕಲಬುರಗಿ ಪತಂಜಲಿ ಯೋಗಪೀಠದ ಶಿವಾನಂದ ಸಾಲಿಮಠ ಹೇಳಿದರು.
ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶ್ವಾಸೋಚ್ಛಾಸ ವಿಾನ ರಹಸ್ಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸವನ್ನು ಜೀವನದ ಭಾಗವಾಗಿಸಿಕೊಂಡರೆ ಆರೋಗ್ಯಕರ ಬದುಕು ನಡೆಸಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಮಾದನ ಹಿಪ್ಪರಗಾದ ಶಾಂತವೀರ ಶಿವಾಚಾರ್ಯರು ಮಾತನಾಡಿ, ಯೋಗವು ದೈಹಿಕ ಆರೋಗ್ಯ ಸುಧಾರಿಸುವುದರ ಜತೆಗೆ ಮನಸ್ಸಿಗೆ ಶಾಂತಿ, ಆತ್ಮವಿಶ್ವಾಸ ಹಾಗೂ ಜೀವನದಲ್ಲಿ ಶಿಸ್ತು ಬೆಳೆಸುತ್ತದೆ ಎಂದರು.
ಚಿಣಮಗೇರಿಯ ವೀರ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಯೋಗಾಭ್ಯಾಸ, ಪ್ರಾಣಾಯಾಮ ಹಾಗೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡರೆ ಅನೇಕ ಕಾಯಿಲೆಗಳ ಅಪಾಯ ತಪ್ಪಿಸಬಹುದು. ಭಾರತೀಯ ಸಂಸತಿಯಲ್ಲಿ ಯೋಗಕ್ಕೆ ವಿಶೇಷ ಸ್ಥಾನವಿದೆ. ಸಂಸ್ಕಾರ, ಯೋಗ ಹಾಗೂ ದೇಶಪ್ರೇಮದ ಮನೋಭಾವ ಬೆಳೆಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಪುಸ್ತಕ ಪರಿಚಯ ಮಾಡಿದ ಡಾ.ಶಿವಶರಣಪ್ಪ ಧಾಬಾ ಮಾತನಾಡಿ, ಮನುಷ್ಯನ ಜೀವನದಲ್ಲಿ ಉಸಿರಾಟದ ಮಹತ್ವ ಅಪಾರವಾಗಿದೆ. ಸರಿಯಾದ ಉಸಿರಾಟದ ಅಭ್ಯಾಸ, ಯೋಗ ಮತ್ತು ಪ್ರಾಣಾಯಾಮದ ಕುರಿತು ಜನರಲ್ಲಿ ಅರಿವು ಮೂಡಿಸುವ ಇಂತಹ ಕೃತಿಗಳು ಆರೋಗ್ಯ ಜಾಗೃತಿಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಡಾ.ಬಿ.ಎಸ್.ಗುಳಶೆಟ್ಟಿ ಮಾತನಾಡಿ, ಯೋಗವು ಭಾರತೀಯ ಪರಂಪರೆಯ ಅಮೂಲ್ಯ ಕೊಡುಗೆ. ಪ್ರತಿಯೊಬ್ಬರೂ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪೊಲೀಸ್ ಅಧಿಕಾರಿ ಬಸವರಾಜ ಮಂಜಾಳಕರ್ ಹಾಗೂ ಡಾ.ನಂದೀಶಕುಮಾರ ಜೀವಣಗಿ ಅತಿಥಿಗಳಾಗಿದ್ದರು.
ಪತ್ರಕರ್ತ ಗುಂಡೂರಾವ ಕಡಣಿ ಅವರನ್ನು ಸತ್ಕರಿಸಿ, ಗೌರವಿಸಲಾಯಿತು. ಗ್ರಂಥದ ಲೇಖಕ ಶಿವರಾಜ ಗರೂರ್, ಮಲ್ಲಿನಾಥ ಕೊಳ್ಳೂರ ಮೇಳಕುಂದಿ ಉಪಸ್ಥಿತರಿದ್ದರು. ಸಿದ್ದಣಗೌಡ ಪಾಟೀಲ್ ಕಡಣಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದಣಗೌಡ ಮಾಲಿಪಾಟೀಲ ಸ್ವಾಗತಿಸಿದರು. ಕಿರಣ್ ಪಾಟೀಲ್ ನಿರೂಪಿಸಿದರು. ಶರಣಗೌಡ ಪಾಟೀಲ ಪಾಳಾ, ಈರಣ್ಣ ಕಂಬಾರ, ಸಿದ್ದರಾಮ ರಾಜಮಾನೆ, ಬಸವರಾಜ ಪಾಟೀಲ, ಬಸವಂತರಾಯ ಕೋಳಕೂರ, ಪತ್ರಕರ್ತ ಸಂಗಮನಾಥ ರೇವತಗಾಂವ, ಶಿವಶರಣಪ್ಪ ಜಮಾದಾರ, ಭೀಮಾಶಂಕರ ಪಾಟೀಲ, ಶ್ರೀಕಾಂತ ಪಾಟೀಲ, ಬಸವರಾಜ ಟೆಂಗಳಿ, ನಾಗರಾಜ ಗಂದಿಗುಡಿ, ಅಂಬಾರಾಯ ಕೋಣೆ, ಸಾಹಿತಿ ವಿಜಯಕುಮಾರ ಪರೂತೆ ಇತರರಿದ್ದರು.