ಬಿಸಿಲ ತಾಪಕ್ಕೆ ಕುಸಿದು ಕಾರ್ಮಿಕ ಸಾವು

ಪರಶುರಾಮ ದೇವಡೆ)
ಪರಶುರಾಮ ದೇವಡೆ)
Published on: 

ಆಳಂದ: ವಿಬಿ-ಜಿ ರಾಮ್​ ಜಿ ಯೋಜನೆಯಡಿ ಜಿಡಗಾ ಗ್ರಾಮದಲ್ಲಿ ಗುರುವಾರ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿದ್ದ ಕೂಲಿ ಕಾರ್ಮಿಕನೊಬ್ಬ ಬಿಸಿಲಿನ ತಾಪಕ್ಕೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಜಿಡಗಾ ಗ್ರಾಮದ ಪರಶುರಾಮ ಚಂದ್ರಕಾಂತ ದೇವಡೆ (35) ಮೃತಪಟ್ಟವ. ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿದ ಬೆನ್ನಲ್ಲೆ ಬಿಸಿಲಿನ ತಾಪವೂ ತೀವ್ರಗೊಂಡಿದೆ. ರಾಜೋಳ&ಜಿಡಗಾ ಮಧ್ಯೆ ನಡೆಯುತ್ತಿದ್ದ ಕೆರೆ ಹೂಳೆತ್ತುವ ಕೆಲಸಕ್ಕೆ ಪರಶುರಾಮ ಸೇರಿ ಎನ್​ಎಂಆರ್​ನಲ್ಲಿ ದಾಖಲಾಗಿದ್ದ 287 ಕಾರ್ಮಿಕರು ಬಂದಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಗೆ ಬಿಸಿಲಿನ ತಾಪ ತಾಳಲಾರದೆ ಪರಶುರಾಮಗೆ ನೀರಡಿಕೆಯಾಗಿದೆ. ನೀರು ಕುಡಿದ ಕೆಲವೇ ಣಗಳಲ್ಲಿ ಕುಸಿದು ಬಿದ್ದು ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾನೆ.

ಪಿಡಿಒ ಶರಣಬಸಪ್ಪ ಪೂಜಾರಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬಕ್ಕೆ ಆಧಾರವಾಗಿದ್ದ

ಪರಶುರಾಮ ತಂದೆ ಚಂದ್ರಕಾಂತ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ತಾಯಿ, ಅಕ್ಕ, ತಮ್ಮ ಹಾಗೂ ಪತ್ನಿಗೆ ಪರಶುರಾಮ ಅವರೇ ಆಧಾರವಾಗಿದ್ದ. ಮೂರು ತಿಂಗಳ ಹಿಂದಷ್ಟೇ ಪತ್ನಿಗೆ ಹೆರಿಗೆಯಾಗಿದ್ದು, ಪುಟ್ಟ ಕಂದಮ್ಮ ತಂದೆಯನ್ನು ಕಳೆದುಕೊಂಡು ಅನಾಥವಾಗಿದೆ.

ವಿಬಿ-ಜಿ ರಾಮ್​ ಜಿ ಯೋಜನೆಯಡಿ ಕೆಲಸ ಮಾಡುವ ಸಂದರ್ಭದಲ್ಲಿ ಕಾರ್ಮಿಕರು ಆಕಸ್ಮಿಕವಾಗಿ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ನೀಡುವ ನಿಯಮವಿದೆ. ಪ್ರಕರಣವನ್ನು ಪರಿಶೀಲಿಸಿ ನಿಯಮಾನುಸಾರ ಮೃತನ ಕುಟುಂಬಕ್ಕೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
ಮಾನಪ್ಪ ಕಟ್ಟಿಮನಿ ತಾಪಂ ಇಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net