ಗಂಡೋರಿ ನೀರು ಬಸವಕಲ್ಯಾಣಕ್ಕೆ ಬಿಡಲ್ಲ

ಮಹಾಗಾಂವ್​ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನವ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದಯಾನಂದ ಪಾಟೀಲ್​, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಗಿರೀಶ ಮಾಲಿಪಾಟೀಲ್​, ವಿವೇಕ ಮಹಾಹಾಜ, ಶಿವರಾಜ ಪಾಟೀಲ್​, ಶಿವಯೋಗಿ ಕಳ್ಳಿಮಠ, ಸಂಗಣ್ಣ ಹತ್ತಿ ಇದ್ದರು.
ಮಹಾಗಾಂವ್​ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನವ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದಯಾನಂದ ಪಾಟೀಲ್​, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಗಿರೀಶ ಮಾಲಿಪಾಟೀಲ್​, ವಿವೇಕ ಮಹಾಹಾಜ, ಶಿವರಾಜ ಪಾಟೀಲ್​, ಶಿವಯೋಗಿ ಕಳ್ಳಿಮಠ, ಸಂಗಣ್ಣ ಹತ್ತಿ ಇದ್ದರು.
Published on: 

ಕಮಲಾಪುರ: ತಾಲೂಕಿನ ಜೀವನಾಡಿ ಎಂದೇ ಖ್ಯಾತಿ ಪಡೆದಿರುವ ಗಂಡೋರಿ ಜಲಾಶಯದ ನೀರನ್ನು ಬಸವಕಲ್ಯಾಣಕ್ಕೆ ಸರಬರಾಜು ಮಾಡುವ ಯೋಜನೆ ನ್ಯಾಯಸಮ್ಮತವಲ್ಲ. ಯಾವುದೇ ಕಾರಣಕ್ಕೂ ಗಂಡೋರಿ ಜಲಾಶಯದ ನೀರನ್ನು ಕಲ್ಯಾಣಕ್ಕೆ ಬಿಡಲು ಅವಕಾಶ ನೀಡುವುದಿಲ್ಲ ಎಂದು ನವ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದಯಾನಂದ ಪಾಟೀಲ್​ ಹೇಳಿದರು.

ಮಹಾಗಾಂವ್​ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನವ ಕರ್ನಾಟಕ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಗಂಡೋರಿ ಜಲಾಶಯದ ನೀರನ್ನು ಬಸವಕಲ್ಯಾಣಕ್ಕೆ ಹರಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದು ಮುಂದುವರಿದರೆ ರೈತರೊಂದಿಗೆ ಜಲಾಶಯದ ಮುಖ್ಯ ಗೇಟ್​ ಬಳಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಪ್ರಾಣ ಬಿಟ್ಟರೂ ಬಸವಕಲ್ಯಾಣಕ್ಕೆ ನೀರು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ತಾಲೂಕಿನ ರೈತರಿಗೆ ಎರಡನೇ ಕಂತಿನ ವಿಮೆ ಹಣ ನೀಡುವಲ್ಲಿ ಅನ್ಯಾಯವಾಗಿದೆ. ರೈತರ ಮೇಲಿನ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಡಿಸೆಂಬರ್​ನಲ್ಲಿ ರೈತರಿಗೆ ಬೆಂಬಲ ಬೆಲೆ ದೊರೆಯಬೇಕು. ಸೂಕ್ತ ವಿಮೆ ಹಾಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿ, ಕಳೆದ 2-3 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಜಿಲ್ಲೆಯ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್​ ವ್ಯಾಪ್ತಿಯಲ್ಲಿ ಪೈಪ್​ಲೈನ್​ ಸಾಲ ಮರುಪಾವತಿಸದ ರೈತರ ಜಮೀನುಗಳನ್ನು ಹರಾಜು ಮಾಡುವ ಪ್ರಕ್ರಿಯೆ ಆರಂಭಿಸಿರುವುದು ಖಂಡನೀಯ. ಈ ಕುರಿತು ರೈತ ಸಂ ಹೋರಾಟಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಂಘದ ತಾಲೂಕು ಅಧ್ಯಕ್ಷ ಶಿವರಾಜ ಪಾಟೀಲ್​, ಮಹಾಗಾಂವ್​ ಪಿಕೆಪಿಎಸ್​ ಮಾಜಿ ಅಧ್ಯ ಗಿರೀಶ ಮಾಲಿಪಾಟೀಲ್​, ಮಂಜುನಾಥ ಧುತ್ತರಗಾಂವ್​ ಮಾತನಾಡಿದರು.

ನಾಗನಾಥ ಮಠದ ಶ್ರೀ ವಿವೇಕ ಮಹಾಹಾಜ, ಶಿವಯೋಗಿ ಕಳ್ಳಿಮಠ, ಶಾಂತಪ್ಪ ಮಾಲಿಪಾಟೀಲ್​, ಮೇರಾಜ ಪಾಟೀಲ್​, ಶರಣು ಸ್ವಾಮಿ ಇತರರಿದ್ದರು.

ನಿರಂಜನ ಸ್ವಾಮಿ ನಿರೂಪಣೆ ಮಾಡಿದರು. ಸಂಜಯಕುಮಾರ ನಾಟೀಕರ್​ ಸ್ವಾಗತಿಸಿದರು.

ಪದಾಧಿಕಾರಿಗಳ ನೇಮಕ

ನವ ಕರ್ನಾಟಕ ರೈತ ಸಂದ ಮಹಾಗಾಂವ್​ ಗ್ರಾಮ ಟಕದ ಅಧ್ಯರಾಗಿ ಶರಣಬಸಪ್ಪ ಬಾಳಿ, ಉಪಾಧ್ಯರಾಗಿ ಸಂಗಮೇಶ ಹತ್ತಿ, ಕಾರ್ಯದರ್ಶಿಯಾಗಿ ಸಂಜಯಕುಮಾರ ನಾಟೀಕರ್​, ಖಜಾಂಚಿಯಾಗಿ ರೇವಣಸಿದ್ದಪ್ಪ ಕಿಣಗಿ ಅವರನ್ನು ಆಯ್ಕೆ ಮಾಡಲಾಯಿತು.

ಗಂಡೋರಿ ಜಲಾಶಯದಿಂದ ಕಾಲುವೆಗಳಿಗೆ ಅಗತ್ಯ ನೀರು ಬಿಡುತ್ತಿಲ್ಲ. ಜೆಸ್ಕಾಂನವರು ಏಳು ಗಂಟೆ ತ್ರಿಫೇಸ್​ ವಿದ್ಯುತ್​ ನೀಡದೆ ರೈತರಿಗೆ ವಂಚಿಸುತ್ತಿದ್ದಾರೆ. ಬರದಲ್ಲಿರುವ ರೈತರಿಗೆ ಇದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಿ, ರೈತರಿಗೆ ಉತ್ತಮ ಸೇವೆ ನೀಡಬೇಕು.
> ಗಿರೀಶ ಮಾಲಿಪಾಟೀಲ್​, ಮಾಜಿ ಅಧ್ಯಕ್ಷ, ಪಿಕೆಪಿಎಸ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net