ರೈತರ ಸಾಲಮನ್ನಾ ಮಾಡಿ

ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಮಲಾಪುರ ತಹಸಿಲ್​ ಕಚೇರಿ ಎದುರು ವಿವಿಧ ಸಂಟನೆಗಳು ಪ್ರಮುಖರು ಪ್ರತಿಭಟನೆ ನಡೆಸಿದರು. ಅಮೃತ ಗೌರೆ, ಸಿದ್ದಣ್ಣಗೌಡ ಗೊಳೆದ, ಸಿದ್ದಣ್ಣಗೌಡ ಬಿರಾದಾರ, ವಿಜಯಕುಮಾರ ರಟಕಲ್​, ಶರಣಪ್ಪ ಯಲಪಳ್ಳಿ, ಪ್ರಭಾಕರ ಗೌರೆ, ಅಲೋಕಕುಮಾರ ಗೌರೆ ಇತರರಿದ್ದರು.

Published on: 

ಕಮಲಾಪುರ: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ರೈತಾಪಿ ವರ್ಗ ತತ್ತರಿಸಿ ಹೋಗಿದ್ದು, ಅನ್ನದಾತರ ಬದುಕು ರಸ್ತೆಗೆ ಬಂದಿದೆ. ಕೂಡಲೇ ಸರ್ಕಾರ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್​ಗಳಲ್ಲಿನ ಸಾಲ ಮನ್ನಾ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಮೃತ ಗೌರೆ ಒತ್ತಾಯಿಸಿದರು. ಸಾಲಮನ್ನಾಕ್ಕೆ ಒತ್ತಾಯಿಸಿ ವಿವಿಧ ಸಂಟನೆಗಳಿಂದ ತಹಸಿಲ್​ ಕಚೇರಿ ಎದುರು ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಮಳೆ ಕೊರತೆಯಿಂದ ಶೇ.90 ಬೆಳೆ ಹಾನಿಯಾಗಿದೆ. ಬರ ಆವರಿಸಿರುವುದರಿಂದ ಹಿಂಗಾರು ಬಿತ್ತನೆಯೂ ಶುರುವಾಗಿಲ್ಲ. ಹೀಗಾಗಿ ಸಾಲಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ವಯಸ್ಸಾದ ವೃದ್ಧರ ಪಿಂಚಣಿ ಸ್ಥಗಿತಗೊಂಡಿದ್ದು, ಸಮಸ್ಯೆ ಅನುಭವಿಸಬೇಕಾಗಿದೆ. ವಿವಿಧ ಪಿಂಚಣಿದಾರರು ಬದುಕು ನಡೆಸುವುದು ಕಷ್ಟಕರವಾಗಿದೆ. ಕೂಡಲೇ ಎಲ್ಲ ಪಿಂಚಣಿ ಮರು ಆರಂಭಿಸಬೇಕು. ಬಡವರ ಪಡಿತರ ಚೀಟಿ ರದ್ದು ಮಾಡುವ ಕಾರ್ಯ ಕೈಬಿಡಬೇಕು. ಬೆಣ್ಣೆತೊರಾ ಜಲಾಶಯ ಹಾಗೂ ಮುಲ್ಲಾಮಾರಿ ನದಿಯಿಂದ ಕೆರೆ ತುಂಬುವ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್​ ಮಹಮ್ಮದ್​ ಮೋಹಸಿನ್​ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಸಿದ್ದಣ್ಣಗೌಡ ಗೊಳೆದ್​, ಸಿದ್ದಣ್ಣಗೌಡ ಬಿರಾದಾರ, ವಿಜಯಕುಮಾರ ರಟಕಲ್​, ಶರಣಪ್ಪ ಎಲಪಳ್ಳಿ, ಪ್ರಭಾಕರ ಗೌರೆ, ಅಲೋಕಕುಮಾರ ಗೌರೆ ಇತರರಿರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net