

ಸೇಡಂ: ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗೆ ಸದನದಲ್ಲಿ ಧ್ವನಿಯಾಗುವ ಶಶೀಲ್ ನಮೋಶಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಮನವಿ ಮಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನರ್ಮದಾದೇವಿ ಗಿಲ್ಡಾ ಕಾಲೇಜು, ಮಾತೃಛಾಯಾ ಪದವಿಪೂರ್ವ ಕಾಲೇಜು, ನೃಪತುಂಗ ಪದವಿ ಮಹಾವಿದ್ಯಾಲಯ ಸೇರಿ ವಿವಿಧ ಶಾಲಾ&ಕಾಲೇಜುಗಳಿಗೆ ಶುಕ್ರವಾರ ತೆರಳಿ ಈಶಾನ್ಯ ಶಿಕ್ಷಕರ ಮತೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಪರ ಮತಯಾಚಿಸಿದ ಅವರು, ಶಿಕ್ಷಕರು ಎದುರಿಸುವ ಸಮಸ್ಯೆ, ಶಿಕ್ಷಣ ಕ್ಷೇತ್ರದ ಸವಾಲು ಹಾಗೂ ಉಪನ್ಯಾಸಕರ ವಿವಿಧ ಬೇಡಿಕೆ ಕುರಿತು ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಶೀಲ್ ನಮೋಶಿ ಅವರು ಈಗಾಗಲೇ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ಶಿಕ್ಷಕ ಸಮುದಾಯದ ಸಮಸ್ಯೆ ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯೆಕ್ಷ ಸಂತೋಷಿರಾಣಿ ಪಾಟೀಲ್ ತೆಲ್ಕೂರ, ರಾಜ್ಯ ಪ್ರಬುದ್ಧರ ಪ್ರಕೋಷ್ಠದ ಸಹ ಸಂಚಾಲಕ ಬನ್ನಪ್ಪ ಬಿ.ಕೆ, ಕಾಲೇಜಿನ ಪ್ರಾಂಶುಪಾಲ ಡಾ.ಪಂಡಿತ್ ಬಿ.ಕೆ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಕಾಡಾ ನಿಗಮ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಪ್ರಮುಖರಾದ ಓಂಪ್ರಕಾಶ ಪಾಟೀಲ್, ನಾಗಪ್ಪ ಕೊಳ್ಳಿ, ವೀರೇಶ ಹೂಗಾರ, ತಿರುಪತಿ ಶಹಬಾದಕರ್, ರಾವೇಂದ್ರ ಮೆಕಾನಿಕ್, ವಿಜಯಕುಮಾರ ಆಡಕಿ, ಸಿದ್ದು ಬಾನರ್, ಮಲ್ಕಪ್ಪ ಕೊಡದೂರ, ಗೋವಿಂದ ಯಾಕಂಬ್ರಿ, ವಿನೋದ ಸಾಹುಕಾರ, ಮಹಾದೇವಪ್ಪ ಗೋಣಿ, ಸೂರ್ಯಕಾಂತ ನಿಂಗದಾಳ, ಶಿವಾನಂದಸ್ವಾಮಿ, ರಾಮು ಕಣೇಕಲ್, ರಾಮು ನಾಯಕ ರಾಠೋಡ್, ಶ್ರೀಮಂತ ಅವಂಟಿ, ಜಯಪ್ರಕಾಶ ರಾಠೋಡ್, ಸಂದೀಪ ಪ್ಯಾಟಿ, ನಾಗು ಸಾಹುಕಾರ, ಅಬ್ದುಲ್ ರಶೀದ್, ಮಾರುತಿ ಭೋವಿ, ಬಾಲರಾಜ ಕೊಡಸಾ, ರಾಜು ಭೋವಿ ಇತರರಿದ್ದರು.