ಡಿಸೆಂಬರ್​ನಲ್ಲಿ ಮೂರು ದಿನಗಳ ರೈತ ಸಮಾವೇಶ

ಶಿವಕುಮಾರ ಪಾಟೀಲ್​ ತೆಲ್ಕೂರ
ಶಿವಕುಮಾರ ಪಾಟೀಲ್​ ತೆಲ್ಕೂರ
Published on: 

ಸೇಡಂ: ನವ ಕರ್ನಾಟಕ ರೈತ ಸಂಘದಿಂದ ಡಿಸೆಂಬರ್​ನಲ್ಲಿ ಮೂರು ದಿನ ರಾಷ್ಟ್ರಮಟ್ಟದ ರೈತ ಸಮಾವೇಶ ನಡೆಸಲಾಗುತ್ತಿದೆ ಎಂದು ಸಮಾವೇಶದ ಸ್ವಾಗತ ಸಮಿತಿ ಕಾರ್ಯದರ್ಶಿ ಶಿವಕುಮಾರ ಪಾಟೀಲ್​ ತೆಲ್ಕೂರ (ಜಿಕೆ) ಹೇಳಿದರು. ಕಲಬುರಗಿಯ ಕೆರಿಭೋಸಗಾ ಕ್ರಾಸ್​ನ 18ಎಕರೆ ವಿಶಾಲ ಸ್ಥಳದಲ್ಲಿ ಬೃಹತ್​ ಸಮಾವೇಶ ಆಯೋಜನೆ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಾಜಿ ಸಂಸದ ಬಸವರಾಜ ಪಾಟೀಲ್​ ಸೇಡಂ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​ ನೇತೃತ್ವದಲ್ಲಿ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ. ಗ್ರಾಮ ಸ್ವರಾಜ್ಯ, ಆಹಾರ ಪದ್ಧತಿ, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕುರಿತು ರಾಷ್ಟ್ರೀಯ ವಿಚಾರವಂತರು, ಕೃಷಿ ತರು ಸಲಹೆ& ಸೂಚನೆ ನೀಡುವರು. ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್​ ಚೌಹಾಣ್​ ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಾಲೂಕುಗಳ ಸ್ವಾಗತ ಸಮಿತಿ ರಚನೆಗೂ ಚಿಂತನೆ ಮಾಡಲಾಗಿದ್ದು, ಸೇಡಂ ತಾಲೂಕಿನ ಸಮಿತಿ ರಚನೆಗಾಗಿ ಅ.30ರಂದು ಸಂಜೆ 4ಕ್ಕೆ ಬಾಲಾಜಿ ಕಲ್ಯಾಣ ಮಂಟಪದಲ್ಲಿ ರೈತರ ಸಭೆ ಕರೆಯಲಾಗಿದೆ. ಸದರಿ ಸಭೆಯಲ್ಲಿ ಭಾಗವಹಿಸುವ ಮೂಲಕ ಸಲಹೆ&ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ಮಲ್ಲಿಕಾರ್ಜುನ ಪಾಟೀಲ್​ ಭೂತಪುರ, ಮಲ್ಲಿಕಾರ್ಜುನರೆಡ್ಡಿ ನರ್ಲಾ, ಜಗನ್ನಾಥರೆಡ್ಡಿ ಹೈಯಾಳ, ಮುಕುಂದ ದೇಶಪಾಂಡೆ, ಭಗವಂತರಾಯ ಪಾಟೀಲ್​, ಸಿದ್ದಣ್ಣ ಶೆಟ್ಟಿ, ಮಲ್ಲಿಕಾರ್ಜುನ ರುದ್ನೂರ, ಬಾಲರಾಜ್​ ಕೊಡಸಾ, ಸುನೀಲ ಹಳ್ಳಿ, ರಾಕೇಶ ರುದ್ನೂರ, ನಾಗರಾಜ ಹಾಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net